ಮೈಸೂರು

ಮಹಿಳಾ ಸಮಿತಿ ನಿರ್ಲಕ್ಷ್ಯ : ವೇದಿಕೆಯಿಂದ ನಿರ್ಗಮಿಸಿದ ತಾ.ಪಂ. ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ

ಮೈಸೂರು, (ಜೆ.ಕೆ.ಮೈದಾನ) : ಮಹಿಳಾ ದಸರಾ ಉಪಸಮಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಸಿವಿಸಿಗೊಂಡ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಕಾರ್ಯಕ್ರಮದ ಮಧ್ಯೆದಲ್ಲಿಯೇ ವೇದಿಕೆಯಿಂದ ನಿರ್ಗಮಿಸಿದ ಘಟನೆಗೆ ಮಹಿಳಾ ದಸರಾ ವೇದಿಕೆ ಕಾರ್ಯಕ್ರಮ ಸಾಕ್ಷಿಯಾಯಿತು.

ಜೆ.ಕೆ.ಮೈದಾನದಲ್ಲಿ ಮಹಿಳೆಯರ ಮತ್ತು ಮಕ್ಕಳ ದಸರಾ ಉಪಸಮಿತಿಯಿಂದ ಆಯೋಜಿಸಿದ್ದ ಮಹಿಳಾ ಮತ್ತು ಮಕ್ಕಳ ದಸರಾ ಉದ್ಘಾಟನಾ ಆಹ್ವಾನ ಪತ್ರಿಕೆಯೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ತಾ.ಪಂ. ಮಹಿಳಾ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯನನ್ನು ಯಾವೊಬ್ಬ ಅಧಿಕಾರಿಗಳು ಮಾತನಾಡಿಸಿಲ್ಲ. ಸ್ವಾಗತ ಕಾರ್ಯಕ್ರಮದಲ್ಲಿ ಎಲ್ಲರನ್ನು ಸ್ವಾಗತಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕಿ ಕೆ.ರಾಧಾ ಸ್ವಾಗತ ಭಾಷಣದಲ್ಲಿ ಕಾಳಮ್ಮ ಕೆಂಪರಾಮಯ್ಯ ಹೆಸರನ್ನು ಕೈಬಿಟ್ಟರು, ಇದರಿಂದ ಬೇಸರಿಸಿಗೊಂಡು ಕಾರ್ಯಕ್ರಮದ ಆರಂಭದಲ್ಲಿಯೇ ನಿರ್ಗಮಿಸಿದರು. ಅಲ್ಲದೇ ಆಹ್ವಾನ ಪತ್ರಿಕೆಯಲ್ಲಿಯೂ ಅವರ ಹೆಸರನ್ನು ಕೈಬಿಡಲಾಗಿದೆ.

ಈ ಬಗ್ಗೆ ಸಿಟಿಟುಡೆಯೊಂದಿಗೆ ಮಾತನಾಡಿದ ಕಾಳಮ್ಮ ಕೆಂಪರಾಮಯ್ಯ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರು, ಮಹಿಳಾ ದಸರಾದಲ್ಲಿ ಪಾಲ್ಗೊಳ್ಳು ಖುಷಿಯಿಂದ ಬಂದೆ, ಹೆಸರು ಕರೆಯದೇ ಇರುವುದಕ್ಕೆ ಬೇಸರ ಮೂಡಿದೆ ಆದರೂ ಪರವಾಗಿಲ್ಲ ನಾಡ ಹಬ್ಬ ದಸರಾ ನಿರ್ವಿಘ್ನವಾಗಿ ನಡೆಯಬೇಕು, ಅಲ್ಲದೇ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಬಿಟ್ಟಿರುವುದು ನನ್ನ ಗಮನಕ್ಕೆ ಬಂದಿಲ್ಲವೆಂದು ನುಡಿದರು.  ಈಗಾಗಲೇ ಹಲವಾರು ದಸರಾ ಕಾರ್ಯಕ್ರಮಗಳಿರುವುದರಿಂದ ಪಾಲ್ಗೊಳ್ಳಲು ತೆರಳುತ್ತಿರುವೆ ಎಂದರು. ಸ್ವಾಗತ ಭಾಷಣದಲ್ಲಿ ತಮ್ಮ ಹೆಸರನ್ನು ಕರೆಯದೆ ಇರುವುದರಿಂದ ಬೇಸರಗೊಂಡಿರುವುದು ಕಂಡು ಬಂತು.
ವಾಸ್ತವದಲ್ಲಿ ಜೆಡಿಎಸ್ ಪಕ್ಷದವರಾದ ಕಾಳಮ್ಮ ಕೆಂಪರಾಮಯ್ಯನವರ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ನಮೂದಿಸಿದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂಬುದು ಕೆಲ ಜೆಡಿಎಸ್ ಮುಖಂಡ ಅಭಿಪ್ರಾಯವಾಗಿದೆ. (ವರದಿ : ಕೆ.ಎಂ.ಆರ್)

Leave a Reply

comments

Related Articles

error: