ಪ್ರಮುಖ ಸುದ್ದಿಮೈಸೂರು

ಇಂದಿನಿಂದ ಆರಂಭಗೊಂಡಿದೆ ಮೈಸೂರು- ಬೆಂಗಳೂರು ಆಕಾಶ ಅಂಬಾರಿ ವಿಮಾನಯಾನ

ಮೈಸೂರು,ಸೆ.21:- ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ರಾಜ್ಯ ಪ್ರವಾಸೋದ್ಯಮ ಇಲಾಖೆ ವತಿಯಿಂದ ಕೇರಳಿ ಏವಿಯೇಷನ್ ಪ್ರೈ.ಲಿ.ಸಹಯೋಗದೊಂದಿಗೆ ಬೆಂಗಳೂರಿನಿಂದ ಮೈಸೂರಿಗೆ ವಿಶೇಷ ವಿಮಾನದ ಮೂಲಕ ಪ್ರಯಾಣಿಸುವ ಆಕಾಶ ಅಂಬಾರಿ ವಿಮಾನಯಾನವನ್ನು ಆಯೋಜಿಸಿದೆ. ಯಾನವು ಸೆ.21ರಿಂದ 30ರವರೆಗೆ ನಡೆಯಲಿದೆ.

ಬೆಂಗಳೂರಿನಿಂದ ಗುರುವಾರ ಆಗಮಿಸಿದ ಪ್ರವಾಸೋದ್ಯಮ ಇಲಾಖೆಯ‌ ಪ್ರಧಾನ ಕಾರ್ಯದರ್ಶಿ‌ ‌ಗೌರವ್ ಗುಪ್ತ,  ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮ್ಯಾನೇಜಿಂಗ್ ಡೈರೆಕ್ಟರ್ ಕುಮಾರ್ ಪುಷ್ಕರ್, ಹಾಗೂ ಪ್ರವಾಸೋದ್ಯಮ ಇಲಾಖೆಯ ನಿರ್ದೆಶಕಿ ಎನ್. ಮಂಜುಳ ಆಕಾಶ ಅಂಬಾರಿ ಮೂಲಕ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದರು, ಮೈಸೂರು ವಿಮಾನ ನಿಲ್ದಾಣದ ಮ್ಯಾನೇಜರ್‌ ಮನೋಜ್ ಕುಮಾರ್ ಸಿಂಗ್ ಅವರು ಹೂ ಗುಚ್ಛನೀಡಿ ಸ್ವಾಗತಿಸಿದರು.

ಆಕಾಶ ಅಂಬಾರಿಯ ಅವಳಿ ಎಂಜಿನ್ ವಿಮಾನವಾದ ಕಿಂಗ್ ಏರ್ ಸಿ90 ಅಲ್ಲಿ 06ಸೀಟುಗಳಿದ್ದು, ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಸಂಚರಿಸಲಿದೆ. ನಾನ್ ಷೆಡ್ಯೂಲ್ ವಿಮಾನಯಾನವಾಗಿದ್ದು, ಸರ್ಕಾರದ ವತಿಯಿಂದ ಪ್ರತಿ ವ್ಯಕ್ತಿಗೆ ಪ್ರತಿಯಾನಕ್ಕೆ ರೂ.4000 ವಿಶೇಷ ದರವನ್ನು ನಿಗದಿಪಡಿಸಲಾಗಿದೆ.ಪ್ರವಾಸೋದ್ಯಮ ವತಿಯಿಂದ ರೂ.40ಲಕ್ಷಗಳ ಅನುದಾನವನ್ನು ಈ ವಿಶೇಷ ಕಾರ್ಯಕ್ರಮಕ್ಕೆ ಮೀಸಲಿರಿಸಲಾಗಿದೆ. ಸಾರ್ವಜನಿಕರಿಂದ ಹೆಚ್ಚಿಗೆ ಬೇಡಿಕೆ ಬಂದಲ್ಲಿ ಹೆಚ್ಚುವರಿ ವಿಮಾನಗಳನ್ನು ಒದಗಿಸಲಿದೆ. ಹೆಚ್ಚಿನ ಮಾಹಿತಿಗಾಗಿ 919342536565, 918317321347 ನ್ನು ಸಂಪರ್ಕಿಸಬಹುದು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: