ಪ್ರಮುಖ ಸುದ್ದಿಮೈಸೂರು

ಸಚಿವ ಹಾಗೂ ಶಾಸಕರ ಕಾರು ಅಪಘಾತ : ಅಪಾಯದಿಂದ ಪಾರು

ಮೈಸೂರು,ಸೆ.21:- ಜಿಲ್ಲಾ ಉಸ್ತುವಾರಿ ಸಚಿವರ ಕಾರು ಅಪಘಾತಕ್ಕೀಡಾದ ಘಟನೆ ಗುರುವಾರ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಸಿಂದೊಳ್ಳಿ ಬಳಿ ನಡೆದಿದೆ.

ಸಚಿವ ಡಾ.ಹೆಚ್.ಸಿ ಮಹದೇವಪ್ಪ ಹಾಗೂ ಶಾಸಕ  ಎಂ.ಕೆ.ಸೋಮಶೇಖರ್ ಅವರ ಕಾರುಗಳ ನಡುವೆ ಡಿಕ್ಕಿ  ಸಂಭವಿಸಿದ್ದು, ಕಬಿನಿ ಜಲಾಶಯಕ್ಕೆ ಬಾಗೀನ ಅರ್ಪಿಸಿ ಹಿಂದಿರುಗುತ್ತಿದ್ದಾಗ ಘಟನೆ ಸಂಭವಿಸಿದೆ. ರಸ್ತೆಯಲ್ಲಿ ಹಳ್ಳ ಕೊಳ್ಳಗಳು ಹೆಚ್ಚಾದ್ದರಿಂದ  ಅವಘಡ ನಡೆದಿದ್ದು. ಕಾರುಗಳು ಜಖಂಗೊಂಡಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಚಿವ ಡಾ.ಹೆಚ್.ಸಿ ಮಹದೇವಪ್ಪ ಅವರ ಕಾರಿನಲ್ಲಿ ಆಪ್ತ ಸಹಾಯಕರೊಬ್ಬರೇ ಕುಳಿತಿದ್ದರು. ಸಚಿವ ಮಹದೇವಪ್ಪನವರು ಮುಖ್ಯಮಂತ್ರಿಗಳ ಕಾರಿನಲ್ಲಿ ತೆರಳಿದ್ದರು ಎಂದು ಹೇಳಲಾಗುತ್ತಿದೆ. (ಆರ್.ವಿ,ಕೆ.ಎಸ್,ಎಸ್.ಎಚ್)

Leave a Reply

comments

Related Articles

error: