
ಮೈಸೂರು
ಆಹಾರ ಮೇಳದ ಮಳಿಗೆಯಲ್ಲಿ ಶಾರ್ಟ್ ಸರ್ಕ್ಯೂಟ್ : ತಪ್ಪಿದ ಭಾರೀ ಅನಾಹುತ
ಮೈಸೂರು,ಸೆ.21:- ನಗರದ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮೈದಾನದಲ್ಲಿ ಆಯೋಜಿಸಲಾದ ಜನಪ್ರಿಯ ಆಹಾರ ಮೇಳದಲ್ಲಿ ಸಿದ್ಧಗೊಳ್ಳುತ್ತಿದ್ದ ಮಳಿಗೆಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿಯ ಕಿಡಿ ಕಾಣಿಸಿಕೊಂಡಿದ್ದು, ಅಗ್ನಿ ಶಾಮಕ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಸಂಭವಿಸಬಹುದಾದ ಭಾರೀ ಅನಾಹುತ ತಪ್ಪಿದೆ.
ದಸರಾ ಮಹೋತ್ಸವ ಪ್ರಯುಕ್ತ ಜನಪ್ರಿಯ ಆಹಾರ ಮೇಳಕ್ಕೆ ಗುರುವಾರ ಮಧ್ಯಾಹ್ನ ಚಾಲನೆ ನೀಡಲಾಗಿದೆ. ದಸರಾ ಮುಗಿಯುವವರೆಗೂ ನಡೆಯಲಿರುವ ಆಹಾರಮೇಳದಲ್ಲಿ ಪಾಲ್ಗೊಳ್ಳಲು ಈಗಾಗಲೇ ಹಲವು ಮಳಿಗೆಗಳು ಬಂದಿವೆ. ಇನ್ನು ಕೆಲವು ಸಿದ್ಧಗೊಳ್ಳುತ್ತಿವೆ. ಸಿದ್ಧಗೊಳ್ಳುತ್ತಿರುವ ಮಳಿಗೆಯೊಂದರಲ್ಲಿ ಇದ್ದಕ್ಕಿದ್ದಂತೆ ಬೆಂಕಿಯ ಕಿಡಿ ಕಾಣಿಸಿಕೊಂಡು ಬೆಂಕಿ ಉರಿಯಲಾರಂಭಿಸಿತು. ಕೂಡಲೇ ಅಗ್ನಿಶಾಂಕ ಸಿಬ್ಬಂದಿಗಳಿಗೆ ವಿಷಯ ತಿಳಿಸಲಾಯಿತು. ತಕ್ಷಣ ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದು, ಸಂಭವಿಸಬಹುದಾದ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. (ಕೆ.ಎಸ್,ಎಸ್.ಎಚ್)