ಸುದ್ದಿ ಸಂಕ್ಷಿಪ್ತ
ದಸರಾ : ಉಚಿತ ಕುಡಿಯುವ ನೀರಿನ ವ್ಯವಸ್ಥೆ ಸೆ.22ಕ್ಕೆ ಉದ್ಘಾಟನೆ
ಮೈಸೂರು,ಸೆ.21 : ಮೈಸೂರು ಕನ್ನಡ ವೇದಿಕೆ, ಡಾ.ರಾಜ್ ಕನ್ನಡಸೇನೆ, ಪ್ರಗತಿ ಪ್ರತಿಷ್ಠಾನ ಇತರ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ದಸರಾ ಪ್ರಯುಕ್ತ ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಉಚಿತ ಶುದ್ಧ ಕುಡಿಯುವ ನೀರು ವಿತರಣೆ ಸೌಲಭ್ಯ ಕಲ್ಪಿಸಲಾಗಿದೆ. ಸೆ.22ರ ಬೆಳಗ್ಗೆ 11 ಗಂಟೆಗೆ ಕೆ.ಆರ್.ವೃತ್ತದಲ್ಲಿ ಉದ್ಘಾಟಿಸಲಾಗುವುದು.
ಮೈಸೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಎನ್.ಕೆ.ಕಾವೇರಿಯಮ್ಮ, ಹೆಚ್.ಎನ್.ನವೀನ್, ಎಂ.ಬಸವರಾಜು, ಬನ್ನೂರು ಕೆ.ರಾಜು ಮೊದಲಾದವರು ಭಾಗವಹಿಸುವರು. (ಕೆ.ಎಂ.ಆರ್)