ಸುದ್ದಿ ಸಂಕ್ಷಿಪ್ತ
ಅಂಧ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಸೆ.22 ರಿಂದ
ಮೈಸೂರು,ಸೆ.21 : ಮೈಸೂರು ವಿವಿಯ ದೃಷ್ಟಿ ಸೆಂಟರ್ ಫಾರ್ ಎಜುಕೇಷನ್ ಆಫ್ ವಿಶುಯಲ್ ಚಾಲೆಂಜ್ಡ್ ಸಂಸ್ಥೆಯಿಂದ ಅಂಧ ವಿದ್ಯಾರ್ಥಿಗಳಿಗಾಗಿ ಎರಡು ದಿನಗಳ ಕಾರ್ಯಾಗಾರವನ್ನು ಸೆ.22 ರಿಂದ ಮಾನಸ ಗಂಗೋತ್ರಿಯ ವಿವಿಯ ಗ್ರಂಥಾಲಯದಲ್ಲಿ ಆಯೋಜಿಸಿದೆ.
ಉದ್ಯಮಿ, ಸಮಾಜ ಸೇವಕ ಆರ್.ಗುರು ಉದ್ಘಾಟಿಸುವರು, ಬೆಂಗಳೂರು ವಿವಿಯ ಡಾ.ಎನ್.ದಶರಥ್, ದೃಷ್ಟಿ ಸಂಯೋಜಕ ಡಾ.ಕೃಷ್ಣ ಹೊಂಬಾಲ ಮೊದಲಾದವರು ಭಾಗಿಯಾಗುವರು. (ಕೆ.ಎಂ.ಆರ್)