ಸುದ್ದಿ ಸಂಕ್ಷಿಪ್ತ

ಶಿವಾನುಭವ ದಾಸೋಹ ಸೆ.23ಕ್ಕೆ

ಮೈಸೂರು,ಸೆ.21 : ಶ್ರೀಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ಆಶ್ರಯದಲ್ಲಿ ಸೆ.23ರ ಸಂಜೆ 6ಕ್ಕೆ ಶಿವಾನುಭವ ದಾಸೋಹ ಮಾಲಿಕೆ 239ನೇಯ ಕಾರ್ಯಕ್ರಮವನ್ನು ಜೆ.ಎಸ್.ಎಸ್ ಆಸ್ಪತ್ರೆಯ ರಾಜೇಂದ್ರ ಭವನದಲ್ಲಿ ಆಯೋಜಿಸಿದೆ.

ಹಿರಿಯ ನ್ಯಾಯವಾದಿ ಎಚ್.ಗಂಗಾಧರನ್ ಅಧ್ಯಕ್ಷತೆ ವಹಿಸುವರು, ನಿವೃತ್ತ ಪ್ರಾದ್ಯಾಪಕ ಎಸ್.ನಂಜುಂಡಯ್ಯ ‘ಶರಣ ಸತಿಯ ಶೃಂಗಾರ ವೈಭವ’ ವಿಷಯವಾಗಿ ಉಪನ್ಯಾಸ ನೀಡುವರು. (ಕೆ.ಎಂ.ಆರ್)

Leave a Reply

comments

Related Articles

error: