ಪ್ರಮುಖ ಸುದ್ದಿಮೈಸೂರು

ಮೈಸೂರು ದಸರಾ ಮಹೋತ್ಸವ 2017 : ಸೆ.22ರ ಕಾರ್ಯಕ್ರಮ ವಿವರ

ಮೈಸೂರು, ಸೆ.21 :  ಮೈಸೂರು ದಸರಾ ಮಹೋತ್ಸವದ 2017ರ ಅಂಗವಾಗಿ 2ನೇ ದಿನ ಅಂದರೆ ಸೆ.22ರಂದು ಜರುಗಲಿರುವ ಕಾರ್ಯಕ್ರಮಗಳ ವಿವರ ಇಂತಿದೆ :

ಜಗನ್ಮೋಹನ ಅರಮನೆ: ಮಕ್ಕಳ ದಸರಾ, ಡ್ರಾಮಾ ಜೂನಿಯರ್ಸ್‍ನ ಮೈಸೂರಿನ ಪ್ರತಿಭೆಗಳಾದ ಮಹೇಂದ್ರ, ಆರಿಷಿ, ಅಮಿತ್ ಹಾಗೂ ಸರಿಗಮಪ ಜೂನಿಯರ್ ಕಲಾವಿದೆ ವೈಷ್ಣವಿ, ಕಿರುತೆರೆ ಬಾಲನಟಿ ದಿಶಾ ಅವರಿಂದ ಉದ್ಘಾಟನೆ ಹಾಗೂ ವಾಗ್ದೇವಿ ಸಂಗೀತ ಶಾಲಾ ಮಕ್ಕಳಿಂದ ಸಮೂಹ ಗಾಯನ (ಬೆಳಗ್ಗೆ 9:30- 10:30); ವಿವಿಧ ವೇಷ ಭೂಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ (11:30-12:30); ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಮಕ್ಕಳಿಂದ ಸಮೂಹ ನೃತ್ಯ (12:30-2:00); ಅರಮನೆ ಆವರಣದ ಟೆಂಟ್ ಶಾಲೆಯ ಮಾವುತ ಹಾಗೂ ಕಾವಾಡಿ ಮಕ್ಕಳಿಂದ ‘ಕಿಂದರ ಜೋಗಿ’ ನಾಟಕ ಮತ್ತು ಸಮೂಹ ನೃತ್ಯ (2:00-3:00); ಏಕಪಾತ್ರಾಭಿನಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಿಂದ (3:00-4:00);  ಸಮೂಹ ನೃತ್ಯ ಪ್ರೌಢಶಾಲಾ ವಿಭಾಗದವರಿಂದ (ಸಂಜೆ 4:00-5:00).

ಚಾಮುಂಡಿ ವಿಹಾರ ಕ್ರೀಡಾಂಗಣ: ರಾಜ್ಯ ದಸರಾ ಕ್ರೀಡಾಕೂಟ, ಅಥ್ಲೆಟಿಕ್ಸ್, ಬ್ಯಾಸ್ಕೆಟ್ ಬಾಲ್, ಬಾಲ್ ಬ್ಯಾಡ್ಮಿಂಟನ್, ಜಿಮ್ನಾಸ್ಟಿಕ್ಸ್, ಹ್ಯಾಂಡ್ ಬಾಲ್,ಕಬಡ್ಡಿ, ಖೋ-ಖೋ, ನೆಟ್ ಬಾಲ್, ಈಜು, ಷಟಲ್ ಬ್ಯಾಡ್ಮಿಂಟನ್, ಥ್ರೋಬಾಲ್, ವಾಲಿಬಾಲ್, ದೇಹಧಾಡ್ರ್ಯ ಸ್ಪರ್ಧೆ (ತೂಕದ ವಿಭಾಗ). (ಬೆಳಗ್ಗೆ 10:00-ಸಂಜೆ 6:00).

ರೊಟರಿ ವೆಸ್ಟ್ ಶಾಲೆ : ರಾಜ್ಯ ದಸರಾ ಕ್ರೀಡಾಕೂಟ,  ಟೇಬಲ್ ಟೆನ್ನೀಸ್.

ಮೈಸೂರು ಟೆನ್ನೀಸ್ ಕ್ಲಬ್ ಮೈದಾನ: ರಾಜ್ಯ ದಸರಾ ಕ್ರೀಡಾಕೂಟ, ಟೆನ್ನೀಸ್.

ಮೈಸೂರು ವಿಶ್ವವಿದ್ಯಾನಿಲಯದ ಸ್ಪೋಟ್ಸ್ ಪೆವಿಲಿಯನ್: ರಾಜ್ಯ ದಸರಾ ಕ್ರೀಡಾಕೂಟ, ಫುಟ್ ಬಾಲ್.

ಐನಾಕ್ಸ್ ಚಿತ್ರಮಂದಿರ : ಮೈಸೂರು ದಸರಾ ಚಲನಚಿತ್ರೋತ್ಸವ, ಲೇಡಿ ಆಫ್ ಲೇಕ್ (10:00); ಸ್ಪ್ರಿಂಗ್ ಸಮ್ಮರ್ ಫಾಲ್ ವಿಂಟರ್ ಅಂಡ್ ಸ್ಪ್ರಿಂಗ್ (12:00); ಮನ ಮಂಥನ (3:00); ದಿ ಕ್ಯಾಟ್ (5:30). ಮನ ಮಂಥನ ಚಿತ್ರ ನಿರ್ದೆಶಕರಾದ ಸುರೇಶ್ ಹೆಬ್ಳಿಕರ್ ಅವರೊಂದಿಗೆ ಸಂವಾದ (3:00).

ಡಿ.ಆರ್. ಸಿ. ಚಿತ್ರಮಂದಿರ: ಮೈಸೂರು ದಸರಾ ಚಲನಚಿತ್ರೋತ್ಸವ, ಮುಕುಂದ ಮುರಾರಿ (10:00); ಇದೊಳ್ಳೆ ರಾಮಾಯಣ (1:00); ಆಕೆ (4:00) ಲಿಫ್ಟ್ ಮ್ಯಾನ್ (7:00).

ಅರಮನೆ ಬಲರಾಮ ದ್ವಾರ: ರೈತ ದಸರಾ ಮೆರವಣಿಗೆ ಉದ್ಘಾಟನೆ ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ. ಮಹದೇವಪ್ಪ ಅವರಿಂದ (ಬೆಳಗ್ಗೆ 9:30).

ಜೆ.ಕೆ.ಮೈದಾನ: ರೈತ ದಸರಾ ವಸ್ತುಪ್ರದರ್ಶನ, ವೇದಿಕೆ ಕಾರ್ಯಕ್ರಮಗಳ ಉದ್ಘಾಟನೆ ಕೃಷಿ ಸಚಿವರಾದ ಕೃಷ್ಣಭೈರೇಗೌಡ ಅವರಿಂದ (ಬೆಳಗ್ಗೆ 10:00); ರೈತರೊಡನೆ ಸಂವಾದ (ಮಧ್ಯಾಹ್ನ 3:00).

ಅರಮನೆ ಬಲರಾಮ ದ್ವಾರ: ಗಾಲಿಗಳ ಮೇಲೆ  ಅರಮನೆ (ಪ್ಯಾಲೇಸ್ ಆನ್ ವ್ಹೀಲ್ಸ್) ಉದ್ಘಾಟನೆ ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ. ಮಹದೇವಪ್ಪ ಅವರಿಂದ (ಬೆಳಗ್ಗೆ 10:00).

ಜೆ.ಕೆ.ಮೈದಾನ: ಚಿಣ್ಣರ ದಸರಾ ಉದ್ಘಾಟನೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಕೃಪಾ ಅಮರ್ ಆಳ್ವ ಅವರಿಂದ (ಬೆಳಗ್ಗೆ -10:30); ಆರೋಗ್ಯ ಮತ್ತು ಪೌಷ್ಠಕತೆ ಕುರಿತು ಉಪನ್ಯಾಸ, ಜಿಲ್ಲ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಡಾ.ಬಿ. ಬಸವರಾಜು ಅವರಿಂದ (ಮಧ್ಯಾಹ್ನ 3:00-3:30); ಸಾಂಸ್ಕ್ರತಿಕ ಕಾರ್ಯಕ್ರಮ ಎಸ್.ಎಲ್.ಡಿ. ಮಹಿಳಾ ವೇದಿಕೆ ಅವರಿಂದ (ಸಂಜೆ 4:00 ರಿಂದ)

ಮಹಾರಾಜಾ ಕಾಲೇಜು ಮೈದಾನ: ಯುವ ದಸರಾ ಕಾರ್ಯಕ್ರಮ ಉದ್ಘಾಟನೆ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಡಾ. ಹೆಚ್.ಸಿ. ಮಹದೇವಪ್ಪ ಅವರಿಂದ; ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ತನ್ವೀರ್ ಸೇಠ್, ಮುಖ್ಯ ಅಥಿತಿ, ಶಾಸಕ ವಾಸು ಅಧ್ಯಕ್ಷತೆ ವಹಿಸಲಿದ್ದಾರೆ, ವಿಶೇಷ ತಾರಾ ಮೆರುಗು ಕನ್ನಡ ಚಿತ್ರ ರಂಗದ ಕಲಾವಿದರಾ ಸೃಜನ್ ಲೋಕೇಶ ಮತ್ತು ರಚಿತ ರಾಮ್; ದಿಲ್ ಸೆ ದಿಲ್ ತಕ್ ಖ್ಯಾತಿಯ ಫಲಾಕ್ ಮುಚ್ಚಲ್ ಅವರಿಂದ ಸಂಗೀತ ಕಾರ್ಯಕ್ರಮ (ಸಂಜೆ 6:00)

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ: ಜನಪ್ರೀಯ ಆಹಾರ ಮೇಳ, ‘ಭಾರತ ಸಂವಿಧಾನದ ಆಶಯಗಳು’ ವಿಚಾರ ಮಂಡನೆ ಪ್ರೋ ಶ್ರೀದೇವಿ, ಪ್ರಾಂಶುಪಾಲರು ವಿದ್ಯಾವರ್ಧಕ ಕಾನೂನು ಕಾಲೇಜು (ಬೆಳಗ್ಗೆ 10:00 ರಿಂದ); ನಳಪಾಕ ಸ್ಪರ್ಧೆ, ಅತ್ತೆ-ಸೊಸೆ ವಿಭಾಗ (ಮಧ್ಯಾಹ್ನ 12:00-2:00); ಸವಿಭೋಜನ ಸ್ಪರ್ಧೆ (3:00-4:00); ಬೀಸು ಕಂಸಾಳೆ, ಎಂ.ಮಹದೇವು ತಂಡದಿಂದ (5:00-6:00); ಸುಗಮ ಸಂಗೀತ, ವಿಜಯ್ ಕುಮಾರ್ ಮತ್ತು ತಂಡದವರಿಂದ (6:00-7:30); ಚಲನಚಿತ್ರಗೀತೆ ಕಾರ್ಯಕ್ರಮ, ಆರ್. ಸೋಮರಾಜ್ ಮತ್ತು ತಂಡದವರಿಂದ (7:30-10:00)

ಡಿ. ದೇವರಾಜ ಅರಸು ವಿವಿದೋದ್ಧೇಶ ಕ್ರೀಡಾಂಗಣ: ದಸರಾ ಮಹೋತ್ಸವ ನಾಡಕುಸ್ತಿ,  ಮೈಸೂರು ವಿಭಾಗ ಮಟ್ಟದ ಬಾಲಕರ Pಕುಸ್ತಿ ಪಂದ್ಯಾವಳಿ.  ಉದ್ಘಾಟನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಡಾ. ಹೆಚ್.ಸಿ. ಮಹದೇವಪ್ಪ, ಮುಖ್ಯ ಅಥಿತಿಗಳಾಗಿ ಭಾಗಿಯಾಗಲಿದ್ದಾರೆ. ( ಮಧ್ಯಾಹ್ನ 3:00 ಗಂಟೆ)

ಲಲಿತಮಹಲ್ ಪಕ್ಕದ ಮುಡಾ ಮೈದಾನ: ಜನಪ್ರೀಯ ಆಹಾರ ಮೇಳ, ‘ಭಾರತ ಸಂವಿಧಾನದ ಆಶಯಗಳು’ ವಿಚಾರ ಮಂಡನೆ ಪ್ರೋ.ವಿನಿತ, ಪ್ರಾಂಶುಪಾಲರು ಶಾರದವಿಲಾಸ ಕಾನೂನು ಕಾಲೇಜು (ಬೆಳಗ್ಗೆ 10:00 ರಿಂದ); ನಳಪಾಕ ಸ್ಪರ್ಧೆ, ಅತ್ತೆ-ಸೊಸೆ ವಿಭಾಗ (ಮಧ್ಯಹ್ನಾ 12:00-2:00); ಸವಿಭೋಜನ ಸ್ಪರ್ಧೆ (3:00-4:00); ಗೊರವರ ಕುಣಿತ, ಶಂಕರ ಮತ್ತು ತಂಡದವರಿಂದ (5:00-6:00); ಸಮಕಾಲೀನ ನೃತ್ಯ, ಲೆನಿನ್ ಕಿಂಗ್ ಡಮ್ ಆಫ್ ಡಾನ್ಸ್ (6:00-7:30); ಖವಾಲಿ ಕಾರ್ಯಕ್ರಮ, ಜಾಹಿದ್ ಉಲ್ಲಾಖಾನ್ ಮಸ್ತಾನ್ (7:30-10:00).

ನಿಷಾಧ್ ಬಾಗ್ (ಕುಪ್ಪಣ್ಣ ಪಾರ್ಕ): ದಸರಾ ಫಲಪುಷ್ಪ ಪ್ರದರ್ಶನ, (ಸಂಜೆ 10:00ರಿಂದ).
ಕಾಡಾ ಕಚೇರಿ ಆವರಣ: ಕನ್ನಡ ಪುಸ್ತಕ ಮಾರಾಟ ಮೇಳ, ಕವಿಗೋಷ್ಠಿ ಹಿರಿಯ ಸಾಹಿತಿ ಬಿ.ಟಿ.ಲಲಿತಾ ನಾಯಕ ಅವರ ಅಧ್ಯಕ್ಷತೆಯಲ್ಲಿ (ಸಂಜೆ 5:00).

ಅಂಬಾವಿಲಾಸ ಅರಮನೆ ವೇದಿಕೆ: ದಸರಾ ಸಾಂಸ್ಕ್ರತಿಕ ಕಾರ್ಯಕ್ರಮ, ಸಿತಾರ್- ಸಾರಂಗಿ ಜುಗಲ್ ಬಂದಿ, ಅಂಕುಶ್ ನಾಯಕ್ (ಸಿತಾರ್ ವಾದಕರು), ಉಸ್ತಾದ್ ಫಯಾಜ್ ಖಾನ್ (ಸಾರಮಗಿ ವಾದಕರು) ಹಾಗೂ ಉಸ್ತಾದ್ ರಫಿಕ್ ಖಾನ್ (ಸಿತಾರ್ ವಾದಕರು) (ಸಂಜೆ 6:00-7:00); ಹಿಂದೂಸ್ತಾನಿ ಗಾಯನ, ಪಂಡಿತ್ ಎಂ. ವೆಂಕಟೇಶ್ ಕುಮಾರ್, ಧಾರವಾಡ (ರಾತ್ರಿ 7:00-8:00); ನೃತ್ಯ ವೈಭವ, ವಿದ್ವಾನ್ ಶೋಭನ, ಚೆನೈ (ರಾತ್ರಿ 8:30- 10:00).

ಪುರಭವನ ವೇದಿಕೆ: ದಸರಾ ಸಾಂಸ್ಕ್ರತಿಕ ಕಾರ್ಯಕ್ರಮ, ಮಹಾಭಾರತ, ಪೌರಾಣಿಕ ನಾಟಕ ಶ್ರೀ ಮಹದೇಶ್ವರ ಕಲಾ ಸಂಘ, ಟಿ.ನರಸೀಪುರ (ಬೆಳಗ್ಗೆ 10:00); ಸಂಗ್ರಾಮ ಭಾರತ, ನಾಟಕ, ರಂಗೋತ್ರಿ ತಂಡ, ಬೆಂಗಳೂರು (ಮಧ್ಯಾಹ್ನ 3:00); ಡಾ.ಅಂಬೇಡ್ಕರ್, ನಾಟಕ, ಆದಿಮ ತೇರಳ್ಳಿ ಬೆಟ್ಟ, ಕೋಲಾರ (ರಾತ್ರಿ 7:00-9:00).

ಜಗನ್ಮೊಹನ ಅರಮನೆ ವೇದಿಕೆ: ದಸರಾ ಸಾಂಸ್ಕ್ರತಿಕ ಕಾರ್ಯಕ್ರಮ, ಭರತ ನಾಟ್ಯ, ಲಯಭಿನಯ ಕಲ್ಚರಲ್ ಟ್ರಸ್ಟ್, ಬೆಂಗಳೂರು (ಸಂಜೆ 5:30-6:00 ಗಂಟೆ); ಕೂಚುಪುಡಿ ನೃತ್ಯ, ದಕ್ಷಣವಲಯ ಸಾಂಸ್ಕ್ರತಿಕ ಕೇಂದ್ರದ ಆಂಧ್ರ ಪ್ರದೇಶ ಕಲಾವಿದರಿಂದ (ಸಂಜೆ 5:30-6:00 ಗಂಟೆ); ಜಾನಪದ ಗಾಯನ, ಕೆ.ಎಂ. ಕುಸುಮ ಮತ್ತು ತಂಡ, (ಸಂಜೆ 6:00- 7:00); ನೃತ್ಯ ರೂಪಕ, ಪದ್ಮಿನಿ ಪ್ರಿಯ ನೃತ್ಯ ಕಲಾ ಅಕಾಡೆಮಿ, ಬೆಂಗಳೂರು (ರಾತ್ರಿ 8:00- 9:00).

ಕಲಾಮಂದಿರ ವೇದಿಕೆ: ದಸರಾ ಸಾಂಸ್ಕ್ರತಿಕ ಕಾರ್ಯಕ್ರಮ, ದಕ್ಷಣವಲಯ ಸಾಂಸ್ಕ್ರತಿಕ ಕೇಂದ್ರದ ವತಿಯಿಂದ ಮಿಜೋರಾಂ ಕಲಾವಿದರಿಂದ ಚಿರಾವ್ ನೃತ್ಯ ಪ್ರದರ್ಶನ (ಸಂಜೆ 5:30-6:00 ಗಂಟೆ); ಸುಗಮ ಸಂಗೀತ, ಮಹಲಿಂಗಯ್ಯ ಮಠದ ಮತ್ತು ತಂಡದವರಿಂದ, ಚಿಕ್ಕಬಳ್ಳಾಪುರ (ಸಂಜೆ 6:00- 7:00); ಸಂಗೀತ ನೃತ್ಯ ರೂಪಕ, ನಾದ ಹಂಸ ಅಕಾಡೆಮಿ ಆಫ್ ಮ್ಯೂಸಿಕ್, ಬೆಂಗಳೂರು (ಸಂಜೆ 7:00- 8:00); ನೃತ್ಯ ವೈಭವ, ರೋಹಿಣಿ ಉದಯ್ ಮತ್ತು ತಂಡ, ದಕ್ಷಿಣ ಕನ್ನಡ (ರಾತ್ರಿ 8:00- 9:00).

ಗಾನಭಾರತಿ ವೇದಿಕೆ: ದಸರಾ ಸಾಂಸ್ಕ್ರತಿಕ ಕಾರ್ಯಕ್ರಮ, ಹಿಂದೂಸ್ತಾನಿ ಸಂಗೀತ, ಹನುಮಂತರಾವ್ ಗೋನಾವರ, ರಾಯಚೂರು (ಸಂಜೆ 5:30-6:00 ಗಂಟೆ); ಶಾಸ್ತ್ರೀಯ ಸಂಗೀತ, ಕುಮಾರಿ ರಜನಿ ಕರಿಗಾರ ಮತ್ತು ತಂಡ, ಹಾವೇರಿ (ಸಂಜೆ 6:00- 7:00); ಪಂಚ ಮ್ಯಾಂಡೋಲೀನ್, ಎಂ. ಭಾರ್ಗವಿ ಮತ್ತು ತಂಡ, ಮೈಸೂರು (ಸಂಜೆ 7:00- 8:00); ನೃತ್ಯ ರೂಪಕ, ಎಸ್. ವಾಣಿ ಮತ್ತು ತಂಡ,ಬೆಂಗಳೂರು (ರಾತ್ರಿ 8:00- 9:00).

ಚಿಕ್ಕಗಡಿಯಾರ ವೇದಿಕೆ: ದಸರಾ ಸಾಂಸ್ಕ್ರತಿಕ ಕಾರ್ಯಕ್ರಮ, ಸುಗ್ಗಿ ನೃತ್ಯ, ದಕ್ಷಣವಲಯ ಸಾಂಸ್ಕ್ರತಿಕ ಕೇಂದ್ರ ತೆಲಂಗಾಣ ಕಲಾವಿದರಿಂದ (ಸಂಜೆ 5:30-6:00 ಗಂಟೆ); ಸಂಬಾಳವಾದನ, ಮಹೇಶ್ವರಗೌಡ ಮತ್ತು ತಂಡ, ಹಾವೇರಿ (ಸಂಜೆ 6:00- 7:00); ಸುಗಮ ಸಂಗೀತ, ಸಾಂತ್ವಾನ ಮ್ಯೂಸಿಕ್, ಬೆಂಗಳೂರು (ಸಂಜೆ 7:00- 8:00); ಕ್ರಾಂತಿ ಗೀತೆಗಳು, ದೊಡ್ಡಳ್ಳಿ ರಮೇಶ್ ಮತ್ತು ತಂಡ, ಹಾಸನ (ರಾತ್ರಿ 8:00- 9:00).

(ಎನ್.ಬಿ)

Leave a Reply

comments

Related Articles

error: