ಕರ್ನಾಟಕಮೈಸೂರು

“ಸರಳವಾಗಿ ದಸರಾ ದರ್ಶನ” ಕಾರ್ಯಕ್ರಮದಡಿ ಜಿಲ್ಲೆಗಳ ಜನತೆಗೆ ಬಸ್‍, ಗೈಡ್ ವ್ಯವಸ್ಥೆ

ಮೈಸೂರು, ಸೆ.21 : ಮೈಸೂರು ದಸರಾ ಮಹೋತ್ಸವದ ಅಂಗವಾಗಿ “ಸರಳವಾಗಿ ದಸರಾ ದರ್ಶನ”ಕಾರ್ಯಕ್ರಮಕ್ಕೆ ಸೆ.22 ರಂದು ಬೆಳಿಗ್ಗೆ 8.00 ಗಂಟೆಗೆ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಹಾಗೂ ಗಣ್ಯರು ಚಾಲನೆ ನೀಡಲಿದ್ದಾರೆ.

ದಸರಾ ದರ್ಶನ ಕಾರ್ಯಕ್ರಮದ ವಿವರಗಳು :

ದಸರಾ ದರ್ಶನ ಉಪಸಮಿತಿ ವತಿಯಿಂದ ದಿನಾಂಕ:  22-9-2017 ರಿಂದ 26-09-2017ರ ವರೆಗೆ ದಸರಾ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ದಿನಾಂಕ: 22-09-17 ರಿಂದ 24-09-17ರ ನಡುವೆ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಯ 18 ತಾಲ್ಲೂಕುಗಳಿಂದ 108 ಹಾಗೂ ದಿ:25-09-17 ರಿಂದ 26-09-17ರ ನಡುವೆ  ಹಾಸನ ಮತ್ತು ಕೊಡಗು ಜಿಲ್ಲೆಗಳ 11 ತಾಲ್ಲೂಕುಗಳಿಂದ  66 ವಾಹನಗಳು ಸೇರಿದಂತೆ ಒಟ್ಟು 29 ತಾಲ್ಲೂಕುಗಳಿಂದ 174 ವಾಹನಗಳಲ್ಲಿ ಜನತೆಯನ್ನು  ಕರೆತರಲಾಗುವುದು.

ದಸರಾ ನೋಡಿರದ ಮಹಿಳೆಯರು, ವೃದ್ದರು ಹಾಗೂ ಆರ್ಥಿಕವಾಗಿ ಹಿಂದುಳಿದ ಜನರನ್ನು ದಸರಾ ದರ್ಶನಕ್ಕೆ ಕರೆತಂದು ಚಾಮುಂಡಿಬೆಟ್ಟ, ಮೃಗಾಲಯ, ಅರಮನೆ, ರೈತ ದಸರಾ ಹಾಗೂ ಇತರೆ ದಸರಾ ಕಾರ್ಯಕ್ರಮಗಳನ್ನು ತೋರಿಸಲಾಗುವುದು. ಜನರ ಅನುಕೂಲ ಹಾಗೂ ಸುಗಮ ದರ್ಶನಕ್ಕಾಗಿ ಪ್ರತಿ ವಾಹನದೊಡನೆ ಒಬ್ಬ ಜವಾಬ್ದಾರಿಯುತ ಸಿಬ್ಬಂದಿ ನಿಯೋಜಿಸಲು ವ್ಯವಸ್ಥೆ ಮಾಡಿದೆ.

ಪ್ರತಿ ತಾಲ್ಲೂಕಿಗೆ ಪ್ರತಿ ದಿನ ನೀಡಲಾಗುವ ವಾಹನವು ದಿನದ ದಸರಾ ದರ್ಶನ ಮುಗಿಸಿ, ಮುಂದಿನ ದಿನದ ಜನತೆಯನ್ನು ಕರೆದೊಯ್ಯಬೇಕಾದ ಗ್ರಾಮದಲ್ಲಿ ಹಿಂದಿನ ರಾತ್ರಿಯೇ ತಂಗಲು ವ್ಯವಸ್ಥೆ ಮಾಡಲಾಗಿದೆ. ದಸರಾ ದರ್ಶನಕ್ಕೆ ಆಗಮಿಸುವ ಫಲಾನುಭವಿ ರೂ. 50/- ರ ರಿಯಾಯಿತಿ ದರದ ಪಾಸನ್ನು ಖರೀದಿಸಿ ದಸರಾ ದರ್ಶನ ಮಾಡಬಹುದು. ಎಲ್ಲಾ ತಹಶೀಲ್ದಾರವರಿಗೆ ಪಾಸ್‍ಗಳನ್ನು ವಿತರಿಸಲು ಸೂಚಿಸಲಾಗಿದೆ.

ದಸರಾ ದರ್ಶನಕ್ಕೆ ಆಗಮಿಸುವ ಜನತೆಗೆ ಸೂಕ್ತ ಮಾರ್ಗದರ್ಶನ ನೀಡುವ ಸಲುವಾಗಿ ಅವರು ಸಂದರ್ಶಿಸುವ ಸ್ಥಳಗಳಾದ ಚಾಮುಂಡಿಬೆಟ್ಟ, ಮೃಗಾಲಯ, ಅರಮನೆ, ರೈತ ದಸರಾಗಳಲ್ಲಿ ಕ.ರಾ.ರ.ಸಾ.ನಿಗಮದ ನೌಕರರನ್ನು ನಿಯೋಜಿಸಲಾಗುವುದು.

(ಎನ್.ಬಿ)

Leave a Reply

comments

Related Articles

error: