ಮೈಸೂರು

ಯೋಗ ಜ್ಯೋತಿ ನಡಿಗೆಗೆ ಚಾಲನೆ

ಮೈಸೂರು,ಸೆ.21:- ಮೈಸೂರು ದಸರಾ 2017 ರ ಅಂಗವಾಗಿ ಯೋಗ ದಸರಾ ಉಪಸಮಿತಿಯು ನಾಲ್ಕು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.

ಸೆಪ್ಟಂಬರ್ 21, 24 ಮತ್ತು 26 ರಂದು ಯೋಗ ದಸರೆ ಕಾರ್ಯಕ್ರಮಗಳು ನಡೆಯಲಿದ್ದು, ಅದರ ಅಂಗವಾಗಿ ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ದಸರಾ ಯೋಗ ಜ್ಯೋತಿ ನಡಿಗೆಯಲ್ಲಿ ವಿ.ವಿ.ಮೊಹಲ್ಲಾ ಮಾತೃ ಮಂಡಳಿ, ಇಟ್ಟಿಗೆಗೂಡು ದುರ್ಗಾಪರಮೇಶ್ವರಿ ದೇವಸ್ಥಾನ, ಕುವೆಂಪು ನಗರ ಗಾನಭಾರತಿ ಹಾಗೂ ಅಗ್ರಹಾರದ ಶಂಕರ ಮಠದಿಂದ ಈ ನಾಲ್ಕು ಭಾಗಗಳಿಂದ ಯೋಗಪಟುಗಳು,ಯೋಗಾಸಕ್ತರು,ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಯೋಗ ಜ್ಯೋತಿಯನ್ನು ಕೈಯಲ್ಲಿ ಹಿಡಿದು ಮಹಾರಾಜ ಓವಲ್ ಗ್ರೌಂಡ್ಸ್ ಗೆ ಆಗಮಿಸಿದರು.ಜ್ಯೋತಿ ಹಿಡಿದು ಬಂದ ಯೋಗಾಸಕ್ತರಿಗೆ ಯೋಗ ದಸರಾ ಉಪಸಮಿತಿಯಿಂದ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ನಾಲ್ಕು ಭಾಗಗಳಿಂದ ತಂದಂತಹ ಯೋಗ ಜ್ಯೋತಿಯಿಂದಲೇ ಮೈಸೂರು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣನವರ್, ಚಲನಚಿತ್ರ ನಟಿ ಮೈಯೂರಿ,  ಯೋಗ ಉಪಸಮಿತಿಯ ಉಪವಿಶೇಷಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಜಿ. ಜಗದೀಶ ರವರಿಂದ ಯೋಗ ದಸರಾ ಕಾರ್ಯಕ್ರಮ ಉದ್ಘಾಟನೆಗೊಂಡಿತು. ನಂತರ ಯೋಗ ಪಟು ಖುಷಿ ಅವರಿಂದ ಯೋಗ ಪ್ರದರ್ಶನ ನಡೆಯಿತು. ನಂತರ ಯೋಗಪಟುಗಳಿಂದ 30 ನಿಮಿಷ ಯೋಗ ಪ್ರದರ್ಶನ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಯೋಗ ಉಪಸಮಿತಿಯ ಅಧ್ಯಕ್ಷ ಸಿದ್ದಪ್ಪ, ಕಾರ್ಯಾಧ್ಯಕ್ಷರು ರಮ್ಯ. ಕೆ. ಮತ್ತು ಜಿಲ್ಲಾ ಆಯುಷ್ ಅಧಿಕಾರಿ ಬಿ.ಎಸ್. ಸೀತಾಲಕ್ಷ್ಮಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಿಕಾ ಸುರೇಶ್, ಉಪಾಧ್ಯಕ್ಷರುಗಳಾದ ಆರ್.ಜಿ.ಸುರೇಶ್ ಬಾಬು, ಸುಶೀಲಾ ಸುಂದರ್ ರಾಜ್, ತಾಯೂರು ಮಾದೇಶ್, ಬಸವರಾಜು, ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: