ಕರ್ನಾಟಕ

ಗೋಣಿಕೊಪ್ಪ ದಸರಾ ಜನೋತ್ಸವಕ್ಕೆ ಚಾಲನೆ

ರಾಜ್ಯ(ಮಡಿಕೇರಿ) ಸೆ.21 :-39ನೇ ವರ್ಷದ ಗೋಣಿಕೊಪ್ಪ ದಸರಾ ಜನೋತ್ಸವಕ್ಕೆ ಪ್ರೌಢಶಾಲಾ ಮೈದಾನದಲ್ಲಿ ನಿರ್ಮಿಸಿರುವ ಕಾವೇರಿ ಕಲಾ ವೇದಿಕೆಯಲ್ಲಿ ಚಾಮುಂಡೇಶ್ವರಿ ದೇವಿಯ ವಿಗ್ರಹ ಪ್ರತಿಷ್ಠಾಪಿಸುವ ಮೂಲಕ ನವರಾತ್ರಿ ವಿದ್ಯುಕ್ತ ಚಾಲನೆ ನೀಡಲಾಯಿತು.

ತುಲಾ ಲಗ್ನದಲ್ಲಿ ಬೆಳಿಗ್ಗೆ 8.45 ಕ್ಕೆ ದೇವಿಯ ವಿಗ್ರಹವನ್ನು ಸಕಲ ಪೂಜಾ ವಿಧಿವಿಧಾನದ ಮೂಲಕ ಪ್ರತಿಷ್ಠಾಪಿಸಲಾಯಿತು. ಗಣಹೋಮ ಮಾಡುವ ಮೂಲಕ ವಿಘ್ನ ವಿನಾಯಕನಿಗೆ ಪೂಜೆ ಸಲ್ಲಿಸಿದರು. ಕಾವೇರಿ ಕಲಾ ವೇದಿಕೆ ಬಳಿ ಚಾಮುಂಡೇಶ್ವರಿ ಸಭಾಂಗಣ ನಿರ್ಮಿಸಿದ್ದು 10 ದಿನಗಳು ಬೆಳಿಗ್ಗೆ ಮತ್ತು ಸಂಜೆ ಪೂಜೆ ನಡೆಯಲಿದೆ.

ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಶ್ರೀ ಭೋದಸ್ವರೂಪನಂದಾಜೀ ಪಾಲ್ಗೊಂಡು ದುಷ್ಟರ ಶಿಕ್ಷಕಿ, ಶಿಷ್ಟರ ರಕ್ಷಕಿ ಚಾಮುಂಡಿ ದೇವಿಯ ಉತ್ಸವ ಮಾಡುವದರಿಂದ ನಗರದಲ್ಲಿ ಶಾಂತಿ ನೆಲೆಸಲು ಸಹಕಾರಿಯಾಗಿದೆ. ಜಾತಿ,ಧರ್ಮ ಬದಿಗೊತ್ತಿ ನಾವೆಲ್ಲರೂ ಒಂದೇ ಎಂದು ಒಂದಾಗಿ ದಸರಾವನ್ನು ಆಚರಿಸುತ್ತೇವೆ. ನಾಡ ಹಬ್ಬ ದಸರಾ ಯಶಸ್ವಿಯಾಗಲಿ ಎಂದು ಆರ್ಶೀವಚನ ನೀಡಿದರು.

ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಮಾತನಾಡಿ, 39ನೇ ವರ್ಷದ ದಸರಾ ಆಚರಣೆಗೆ ಪ್ರತಿಯೊಬ್ಬರು ಬೆಂಬಲ ನೀಡುತ್ತಿದ್ದಾರೆ. ಕೊಂಚ ಮಳೆ ಅಡ್ಡಿ ಮಾಡಿದ್ದು ಇದರಿಂದ ಯಾವುದೇ ತೊಂದರೆ ಇಲ್ಲ. 9 ದಿನ ಆಚರಣೆ ಯಶಸ್ವಿಗೆ ಪ್ರತಿಯೊಬ್ಬರು ಬೆಂಬಲ ನೀಡುವಂತೆ ಕೋರಿದರು.

ಈ ಸಂದರ್ಭ ಜಿ.ಪಂ ಸದಸ್ಯ ಸಿ.ಕೆ ಬೋಪಣ್ಣ, ತಾ.ಪಂ ಸದಸ್ಯ ಜಯಪೂವಯ್ಯ, ದಸರಾ ಕಾರ್ಯಾಧ್ಯಕ್ಷ ಬಿ.ಎನ್ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಪ್ರಭಾವತಿ, ಖಜಾಂಜಿ ದ್ಯಾನ್ ಸುಬ್ಬಯ್ಯಮತ್ತಿತರರು ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್).

Leave a Reply

comments

Related Articles

error: