ಮೈಸೂರು

ಖಾಲಿ ಖಾಲಿ ದಸರಾ ವಸ್ತುಪ್ರದರ್ಶನ ಉದ್ಘಾಟನೆ

ಮೈಸೂರು, ಸೆ.೨೧: ನಾಡಹಬ್ಬ, ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ದಸರಾ ವಸ್ತು ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಉದ್ಘಾಟಿಸಿದರು.
ವಸ್ತುಪ್ರದರ್ಶನದ ದ್ವಾರದಲ್ಲಿ ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿದರು. ಉದ್ಘಾಟಕರನ್ನು ನಂದಿಧ್ವಜ, ಬೀಸು ಕಂಸಾಳೆ, ವೀರಗಾಸೆ ಮತ್ತಿತರ ಜಾನಪದ ತಂಡಗಳು ಭವ್ಯ ಸ್ವಾಗತ ನೀಡಿದವು. ಅದೇ ರಾಗ, ಅದೇ ಹಾಡು ಎನ್ನುವಂತೆ ದಸರಾ ವಸ್ತುಪ್ರದರ್ಶನದ್ದು ಈ ಬಾರಿಯೂ ಅದೇ ಕತೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ವಸ್ತುಪ್ರದರ್ಶನ ಆವರಣ ಬಹುತೇಕ ಖಾಲಿಯಾಗಿದ್ದು, ಅದನ್ನೇ ಉಸ್ತುವಾರಿ ಸವಿವರು ಉದ್ಘಾಟಿಸಿದರು. ಖಾಸಗಿ ಮಳಿಗೆಗಳೊಂದಿಗೆ ಸರ್ಕಾರಿ ಮಳಿಗೆಗಳು ಸಹ ಇನ್ನೂ ಸಿದ್ದಗೊಳ್ಳುತ್ತಿದ್ದು, ೪೦ ಮಳಿಗೆಗಳಲ್ಲಿ ೧೫ ಮಳಿಗೆಗಳು ಮಾತ್ರ ಸಿದ್ಧಗೊಂಡಿವೆ.
ಈ ವೇಳೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್, ಸಕ್ಕರೆ ಮತ್ತು ಸಣ್ಣ ಕೈಗಾರಿಕಾ ಸಚಿವೆ ಡಾ.ಗೀತಾ ಮಹದೇವಪ್ರಸಾದ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಬಿ.ಸಿದ್ದರಾಜು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಎಂ.ಶಶಿಕುಮಾರ್, ನಗರಪಾಲಿಕೆ ಸದಸ್ಯೆ ವನಿತಾ ಪ್ರಸನ್ನ, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಎಸ್.ಅಜಯ್ ರಾಜ್, ಡಿಸಿಸಿ ಸದಸ್ಯ ಶೌಕತ್ ಅಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: