ಸುದ್ದಿ ಸಂಕ್ಷಿಪ್ತ

ಮಹಿಳಾ ದಸರಾದಂದು ಸಿರಿಧಾನ್ಯ ಸ್ಪರ್ಧೆ

ಮಡಿಕೇರಿ ಸೆ.21  : ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಸೆ.24 ರಂದು ಭಾನುವಾರ ಆಯೋಜಿತ ಮಹಿಳಾ ದಸರಾದಲ್ಲಿ ಎರಡನೇ ವರ್ಷದ ಸಿರಿಧಾನ್ಯ ಮೇಳ ಸ್ಪರ್ಧೆಯಲ್ಲಿ ಜಿಲ್ಲೆಯ ಮಹಿಳೆಯರು ಪಾಲ್ಗೊಳ್ಳಬಹುದಾಗಿದೆ.

ಅವರವರು ತಿನ್ನುವ ಆಹಾರ ಅವರವರ ಆರೋಗ್ಯವನ್ನು ನಿರ್ಧರಿಸುತ್ತದೆ ಎಂಬ ಮಾತನ್ನು ಮನನ ಮಾಡಿಕೊಳ್ಳುವ ಕಾಲಘಟ್ಟದಲ್ಲಿ ಸಿರಿಧಾನ್ಯ ಮೇಳ ಮಹತ್ವ ಪಡೆದಿದೆ.  ಸಿರಿಧಾನ್ಯ ಮೇಳ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಕೊರಲೆ, ಬರಗು,  ಸಾಮೆ, ಊದಲು, ಸಚ್ಬೆ, ಜೋಳ, ರಾಗಿ ಇತ್ಯಾದಿ ಸಿರಿಧಾನ್ಯಗಳನ್ನು ಬಳಸಿ ವಿವಿಧ ರೀತಿಯ ತಿಂಡಿ ತಿನಿಸುಗಳನ್ನು , ಸಲಾಡ್ ಗಳನ್ನು ಅಥವಾ ಹೊಸರುಚಿಯನ್ನು ಸಿರಿಧಾನ್ಯಗಳಿಂದಲೇ ತಯಾರಿಸಿ ಸ್ಪರ್ಧೆ ಅಥವಾ ಪ್ರದರ್ಶನಕ್ಕಿಡಬಹುದು.  ಹೆಚ್ಚಿನ ಮಾಹಿತಿಗೆ ಕೆ.ಜಯಲಕ್ಷ್ಮಿ  9663119670, ಚೆಪ್ಪುಡಿರ ಸರು ಸತೀಶ್ 9845426744

ಸಿರಿಧಾನ್ಯ ಮೇಳ ಸೇರಿದಂತೆ ಮಹಿಳಾ ದಸರಾ ಸಂದರ್ಭ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವವರು ಭಾನುವಾರ ಬೆಳಗ್ಗೆ 9.30 ಗಂಟೆಗೆ ಮಡಿಕೇರಿ ಗಾಂಧಿ ಮೈದಾನದಲ್ಲಿ ಹೆಸರನ್ನು ಸ್ಪರ್ಧಾ ಸ್ಥಳದಲ್ಲಿಯೇ ನೋಂದಾಯಿಸಲು ಅವಕಾಶವಿದೆ ಎಂದು ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ತಿಳಿಸಿದ್ದಾರೆ.(ಕೆಸಿಐ,ಎಸ್.ಎಚ್)

Leave a Reply

comments

Related Articles

error: