
Uncategorized
ರವಿ ಅಪ್ಪುಕುಟ್ಟನ್ ಅಧಿಕಾರ ಸ್ವೀಕಾರ
ರಾಜ್ಯ(ಮಡಿಕೇರಿ) ಸೆ.21 : -2017 ರಿಂದ 2020 ರ ವರೆಗಿನ ಅನುಮತಿ ಪಡೆದ ಮಡಿಕೇರಿ ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರವಿ ಅಪ್ಪುಕುಟ್ಟನ್ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು.
ನಗರದಲ್ಲಿರುವ ಸಂಘದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರಾದ ಕೆ.ಬಿ.ಪೂಣಚ್ಚ ಹಾಗೂ ಕಾರ್ಯದರ್ಶಿ ಪಿ.ಎನ್.ರವಿಚಂದ್ರ ಅವರ ಸಮ್ಮುಖದಲ್ಲಿ ಅಧಿಕಾರ ಹಸ್ತಾಂತರ ನಡೆಯಿತು.
ತಾಲೂಕು ಕಾರ್ಯದರ್ಶಿ ದೇವಿ ಪ್ರಸನ್ನ, ಉಪಾಧ್ಯಕ್ಷ ಕಿಶೋರ್, ಜಂಟಿ ಕಾರ್ಯದರ್ಶಿ ನವೀನ್ ಕುಮಾರ್, ಸಂಘಟನಾ ಕಾರ್ಯದರ್ಶಿ ಅನಿಲ್ ಕುಮಾರ್ ಮತ್ತಿತರರು ಹಾಜರಿದ್ದರು. (ಕೆಸಿಐ,ಎಸ್.ಎಚ್)