
ಕರ್ನಾಟಕ
ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 24.49 ಲಕ್ಷ ರೂ. ಲಾಭ : ಸೆ.25 ರಂದು ಮಹಾಸಭೆ
ರಾಜ್ಯ(ಮಡಿಕೇರಿ) ಸೆ.21 :-ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2016-17ನೇ ಸಾಲಿನಲ್ಲಿ 24.49 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.12 ರಷ್ಟು ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆಯೆಂದು ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೇರಳ ಶ್ರೀಮಂಗಲ, ಈರಳೆವಳಮುಡಿ ಮತ್ತು ಕೂಡ್ಲೂರು ಚೆಟ್ಟಳ್ಳಿ ಗ್ರಾಮಗಳ ವ್ಯಾಪ್ತಿಗೆ ಒಳಪಡುವ ಸಂಘವು 1029 ಸದಸ್ಯರನ್ನು ಹೊಂದಿದ್ದು, 88.59 ಲಕ್ಷ ರೂ. ಪಾಲು ಬಂಡವಾಳವನ್ನು ಸಂಗ್ರಹಿಸಿದೆ ಎಂದರು. ಕ್ಷೇಮನಿಧಿ 36.66 ಲಕ್ಷ ರೂ., ಇತರೆ ನಿಧಿಗಳು 86.76 ಲಕ್ಷ ಗಳಷ್ಟಿದೆ. ಸಂಘದ ಸಂಚಯ ಹಾಗೂ ನಿರಖು ಠೇವಣಿ 2017 ಮಾರ್ಚ್ 31ಕ್ಕೆ ರೂ.1080.30 ಲಕ್ಷಗಳಷ್ಟಾಗಿದೆ ಎಂದರು.
ಸಂಘದ ವಾರ್ಷಿಕ ಮಹಾಸಭೆಯು ಸೆ.25 ರಂದು ನಡೆಯಲಿದೆಯೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಹೆಚ್.ಎಸ್.ತಿಮ್ಮಪ್ಪಯ್ಯ, ಪೇರಿಯನ ಎಸ್. ಪೂಣಚ್ಚ, ನೂಜಿಬೈಲು ಡಿ. ನಾಣಯ್ಯ ಹಾಗೂ ಆಂತರಿಕ ಲೆಕ್ಕ ಪರಿಶೋಧಕರಾದ ಹೆಚ್.ಬಿ. ರಮೇಶ್ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)