ಕರ್ನಾಟಕ

ಮಡಿಕೇರಿ ದಸರಾ ಕರಗೋತ್ಸವಕ್ಕೆ ಚಾಲನೆ

ರಾಜ್ಯ(ಮಡಿಕೇರಿ) ಸೆ.21 :- ವಿವಿಧ ಪೂಜಾ ವಿಧಿ, ವಿಧಾನಗಳೊಂದಿಗೆ ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾಕ್ಕೆ ಕರಗೋತ್ಸವದ ಮೂಲಕ ನಗರದ ಪಂಪಿನ ಕೆರೆಯ ಬಳಿ ಚಾಲನೆ ನೀಡಲಾಯಿತು.

ಕಳೆದ ಹಲವಾರು ವರ್ಷಗಳ ಸಂಪ್ರದಾಯದಂತೆ ಈ ಬಾರಿ ಕೂಡ ನಾಲ್ಕು ಶಕ್ತಿ ದೇವತೆಗಳಾದ ಕುಂದುರುಮೊಟ್ಟೆ ಶ್ರೀಚೌಟಿ ಮಾರಿಯಮ್ಮ, ಶ್ರೀಕಂಚಿಕಾಮಾಕ್ಷಿಯಮ್ಮ ಶ್ರೀದಂಡಿನ ಮಾರಿಯಮ್ಮ ಹಾಗೂ ಶ್ರೀಕೋಟೆ ಮಾರಿಯಮ್ಮ ದೇವಾಲಯದ ಕರಗಗಳ ನಗರ ಸಂಚಾರ ಆರಂಭಗೊಂಡಿತು.

ಗುರುವಾರ ಮಧ್ಯಾಹ್ನ ನಾಲ್ಕೂ ದೇವಾಲಯಗಳಲ್ಲಿ ಶಕ್ತಿ ದೇವತೆಗಳ ವಿಶೇಷ ಆರಾಧನೆ ನಡೆಯಿತು. ನಂತರ ವಾದ್ಯಗೋಷ್ಠಿಗಳೊಂದಿಗೆ ಪಂಪಿನ ಕೆರೆಗೆ ತೆರಳಿ ಕರಗ ಕಟ್ಟಲಾಯಿತು. ಸಂಜೆ 6 ಗಂಟೆಯ ನಂತರ ವಿಶೇಷ ಪೂಜೆ, ವಿಧಿ ವಿಧಾನಗಳೊಂದಿಗೆ ಕರಗಗಳು ನಗರ ಸಂಚಾರವನ್ನು ಆರಂಭಿಸಿದವು.

ಕರಗಗಳು ತೆರಳುವ ಹಾದಿಯಲ್ಲಿ ತಳಿರು ತೋರಣ, ಹೂವು, ರಂಗೋಲಿಯ ಅಲಂಕಾರ ಮಾಡಲಾಗಿತ್ತು. ವಿದ್ಯುತ್ ದೀಪಾಲಂಕೃತ ಮಾರ್ಗಗಳು ಕರಗೋತ್ಸವಕ್ಕೆ ಮೆರಗು ನೀಡಿದವು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: