ಪ್ರಮುಖ ಸುದ್ದಿಮೈಸೂರು

ಜಗಮಗಿಸುತ್ತಿದೆ ಸಾಂಸ್ಕೃತಿಕ ನಗರಿ : ದೀಪಾಲಂಕಾರಕ್ಕೆ ಇಂಧನ ಸಚಿವರಿಂದ ಚಾಲನೆ

ಮೈಸೂರು,ಸೆ.21:- ಮೈಸೂರನ್ನು ನೋಡಲು ಇದೀಗ ಎರಡು ಕಣ್ಣು ಸಾಲದು. ಬಣ್ಣ ಬಣ್ಣದ ವಿದ್ಯುದ್ದೀಪಗಳಿಂದ ಇಡೀ ನಗರವೇ ಜಗಮಗಿಸುತ್ತಿದೆ. ಕಣ್ಣು ಹಾಯಿಸಿದಷ್ಟುದ್ದಕ್ಕೂ ಜಗಮಗಿಸುವ ಬಣ್ಣ ಬಣ್ಣದ ವಿದ್ಯುದ್ದೀಪಗಳು ಗಮನ ಸೆಳೆಯುತ್ತಿವೆ.

ನಗರದ ಸಯ್ಯಾಜಿ ರಾವ್ ರಸ್ತೆಯಲ್ಲಿನ ಹಸಿರು ಮಂಟಪದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ದಸರಾ ದೀಪಾಲಂಕಾರಕ್ಕೆ ಸ್ವಿಚ್ ಒತ್ತುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಎಲ್ ಇಡಿ ಬಲ್ಬ್ ಗಳನ್ನು ಬಳಸಿ ದಸರಾಕ್ಕೆ ದೀಪಾಲಂಕಾರ ಮಾಡಿದ್ದು ಸಂತಸ ನೀಡಿದೆ. ವಿದ್ಯುತ್ ಅಲಂಕಾರದಲ್ಲಿ ಮೈಸೂರನ್ನು ನೋಡೋದಕ್ಕೇ ತುಂಬಾ ಚೆನ್ನಾಗಿರಲಿದೆ ಎಂದರು. ಈ ಸಂದರ್ಭ ಮೇಯರ್ ಎಂ.ಜೆ.ರವಿಕುಮಾರ್, ಸಚಿವ ತನ್ವೀರ್ ಸೇಠ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಮೈಸೂರಿನ ಅರಸು ರಸ್ತೆ, ಸರ್ಕಾರಿ ಕಚೇರಿಗಳು, ಕೆ.ಆರ್.ಸರ್ಕಲ್, ರಾಮಸ್ವಾಮಿ ವೃತ್ತ ಸೇರಿದಂತೆ  ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ರಾಮಸ್ವಾಮಿ ವೃತ್ತದಲ್ಲಿ ದೀಪಗಳಿಂದಲೇ ಅರಮನೆ ರಚಿಸಲಾಗಿದೆ. ಚಾಮುಂಡೇಶ್ವರಿ ವಿದ್ಯುತ್ ನಿಯಮಿತ ವತಿಯಿಂದ ದೀಪಾಲಂಕಾರ ಮಾಡಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: