ಪ್ರಮುಖ ಸುದ್ದಿಮೈಸೂರು

ದಸರಾ ದರ್ಶಿನಿ ಕಾರ್ಯಕ್ರಮಕ್ಕೆ ಚಾಲನೆ : ಕೆಎಸ್ಸಾರ್ಟಿಸಿ ಬಸ್ ನಲ್ಲೇ ಬಂದಿಳಿದ ಸಚಿವರು

ಮೈಸೂರು,ಸೆ.22:- ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನಲೆಯಲ್ಲಿ ದಸರಾ ದರ್ಶಿನಿ ಪ್ಯಾಲೇಸ್ ಆನ್ ವ್ಹೀಲ್ಸ್ ಮತ್ತು ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ ಪೋಸ್ಟರ್  ಬಿಡುಗಡೆಗೊಳಿಸಿ, ಚಾಲನೆ ನೀಡಿದರು. ಈ ಸಂದರ್ಭ ಶಾಸಕ ಎಂ.ಕೆ.ಸೋಮಶೇಖರ್, ಕಾಂಗ್ರೆಸ್ ಮುಖಂಡರಾದ ಮೂರ್ತಿ, ಶಿವಣ್ಣ, ಕೆ.ಎಸ್.ಆರ್.ಟಿ.ಸಿ.ವಿಭಾಗೀಯ ನಿಯಂತ್ರಣಾಧಿಕಾರಿ ವಾಸು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ಯಾಲೇಸ್ ಆನ್ ವೀಲ್ಸ್ ಚಾಲನೆಗಾಗಿ ಕೆಎಸ್ಸಾರ್ಟಿಸಿ ಬಸ್ ನಲ್ಲೇ ಸಾರಿಗೆ ಸಚಿವ ಎಚ್.ಎಂ. ರೇವಣ್ಣ  ಮೈಸೂರಿಗೆ ಬಂದಿಳಿದರು. ಅವರನ್ನು ಹೂಗುಚ್ಛ ನೀಡುವ ಮೂಲಕ ಆತ್ಮೀಯವಾಗಿ ಸ್ವಾಗತಿಸಲಾಯಿತು.

ಒಟ್ಟು ನಾಲ್ಕು ಪ್ಯಾಕೇಜ್ ಗಳಲ್ಲಿ ಪ್ರವಾಸಿ ತಾಣಗಳ ದರ್ಶನ ಸಿಗಲಿದೆ. ದಸರಾ ದರ್ಶಿನಿ ಪ್ಯಾಕೇಜ್ ಅಡಿಯಲ್ಲಿ ಚಾಮುಂಡಿ ಬೆಟ್ಟ, ಮೃಗಾಲಯ, ಅರಮನೆ, ರೈತ ದಸರಾ ಕಾರ್ಯಕ್ರಮಗಳ ದರ್ಶನ ಸಿಗಲಿದೆ. ಮೈಸೂರು ಕೊಡಗು,ಮಂಡ್ಯ, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳ 174 ಆಯ್ದ ಫಲಾನುಭವಿಗಳಿಗೆ ಮಾತ್ರ ಕೇವಲ 50ರೂಗಳ ರಿಯಾಯಿತಿ ಪಾಸ್ ನಲ್ಲಿ ದಸರಾ ದರ್ಶನ ಲಭ್ಯವಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: