Uncategorizedದೇಶ

ಕಾಂಗ್ರೆಸ್‍ಗೆ ಗುಡ್‍ಬೈ ಮಾಜಿ ಸಿಎಂ

ದೇಶ(ಮುಂಬೈ),22: ರಾಜ್ಯದ ಮಾಜಿ  ಮುಖ್ಯಮಂತ್ರಿ ನಾರಾಯಣ ರಾಣೆ  ಕಾಂಗ್ರೆಸ್‍ನೊಂದಿಗೆ ಇದ್ದ ಬಹುಕಾಲದ ಬಾಂಧವ್ಯವನ್ನು ಕೊನೆಗೊಳಿಸಿದ್ದು,  ಮಂಗಳವಾರ ಪಕ್ಷಕ್ಕೆ ಗುಡ್‍ಬೈ ಹೇಳಿದ್ದಾರೆ.

ಪಕ್ಷದಲ್ಲಿ ನನ್ನನ್ನು ಕಡೆಗಣಿಸಲಾಗುತ್ತಿದ್ದು, ಮುಖ್ಯಮಂತ್ರಿ ಸ್ಥಾನವನ್ನು ನೀಡುತ್ತೇವೆ ಎಂದು ಹೈಕಮಾಂಡ್ ಈ ಹಿಂದೆ ಮಾತು ಕೊಟ್ಟಿತ್ತು. ಆದರೆ ಪಕ್ಷ ತನಗೆ ಅನ್ಯಾಯವನ್ನು ಮಾಡುತ್ತಿದ್ದು, ನನ್ನ ಬೆಂಬಲಿಗರಿಗೂ ಸೂಕ್ತ ಸ್ಥಾನಮಾನ ನೀಡುತ್ತಿಲ್ಲ ಅದರಿಂದಲೇ ತಾನು ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ರಾಣೆ ತಿಳಿಸಿದ್ದಾರೆ. 2005ರಲ್ಲಿ ನಾನು ಶಿವಸೇನೆ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ವೇಳೆ ಆರು ತಿಂಗಳಿನಲ್ಲಿ ಸಿಎಂ ಮಾಡುವುದಾಗಿ ಆಶ್ವಾಸನೆಯನ್ನು ನೀಡಿದ್ದರು. ಆದರೆ 12 ವರ್ಷಗಳ ಕಾಲ ಪಕ್ಷಕ್ಕಾಗಿ ಸೇವೆ ಸಲ್ಲಿಸಿದ್ದರೂ, ತನಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಿಲ್ಲ. ಅದರಿಂದ ಕಾಂಗ್ರೆಸ್ ಪಕ್ಷದಿಂದ ಹೊರ ನಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.
 ನಾರಾಯಣ್ ತಮ್ಮ ನಿರ್ಧಾರದ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೂ ಪಾತ್ರವನ್ನು ಬರೆದಿದ್ದಾರೆ. ಈ ವೇಳೆ ನಾಯಕರಾದ ಅಶೋಕ್ ಚೌಹಾಣ್ ಮತ್ತು ಅಹ್ಮದ್ ಪಾಟೀಲ್ ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. ಪಕ್ಷಕ್ಕೆ ಸೇರ್ಪಡೆಯದಾಗಿನಿಂದ ರಾಜಕೀಯ ಕಾರಣಗಳಿಗಾಗಿ ಹಲವು ಸಂಘರ್ಷಗಳು ನಡೆದಿದೆ ಎಂದು ಹೇಳಿದರು. ನಾರಾಯಣ್ ಶುಕ್ರವಾರದಿಂದ ಮಹಾರಾಷ್ಟ್ರ ರಾಜ್ಯ ಪ್ರವಾಸವನ್ನು ಕೈಗೊಳ್ಳಲಿದ್ದು, ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಹಾಗೂ ಅಶೋಕ್ ಚೌಹಾಣ್ ಅವರ ಸ್ವ ಕ್ಷೇತ್ರಗಳಲ್ಲಿಯು ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ( ಪಿ.ಜೆ )

Leave a Reply

comments

Related Articles

error: