ಕರ್ನಾಟಕಮೈಸೂರು

ಶ್ರೀರಂಗಪಟ್ಟಣ ದಸರಾ : ಸೆ.25ರಂದು ಸೈಕಲ್ ರೇಸ್, ಕೆಸರುಗದ್ದೆ ಆಟೋಟ, ನಾಡಕುಸ್ತಿ ಸ್ಪರ್ಧೆ

ಮಂಡ್ಯ, ಸೆ.22: ಶ್ರೀರಂಗಪಟ್ಟಣ ದಸರಾ ಮಹೋತ್ಸವ ಅಂಗವಾಗಿ ‘ಇಂಧನ ಉಳಿಕೆಗೂ ಸೈ ಆರೋಗ್ಯ ವೃದ್ಧಿಗೂ ಸೈ’ ಸಂದೇಶದ ಸಾರುವ ಸೈಕ್ಲೋತಾನ್ ಸ್ಪರ್ಧೆಯನ್ನು ಸೆಪ್ಟಂಬರ್ 25 ರಂದು ಬೆಳಿಗ್ಗೆ 7 ಗಂಟೆಗೆ ಶ್ರೀರಂಗಪಟ್ಟಣ ತಾಲ್ಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.

ಪಾಸ್ಟ್ ಸೈಕಲ್ ರೇಸ್‍ಗೆ ವಯೋಮಿತಿಯ ನಿರ್ಬಂಧವಿರುವುದಿಲ್ಲ. ಪುರುಷರಿಗೆ 18 ಕಿಮಿ ಹಾಗೂ ಮಹಿಳೆಯರಿಗೆ 10 ಕಿಮಿ ಸೈಕಲ್ ರೇಸ್ ಇರುತ್ತದೆ. ಸ್ಲೋ ಸೈಕಲ್ ರೇಸ್‍ಗೆ 100 ಮೀಟರ್ ಇದ್ದು, ಬಾಲಕ/ ಬಾಲಕಿಯರಿಗೆ 16 ವರ್ಷ, ಯುವಕ/ಯುವತಿಯರಿಗೆ 17 ರಿಂದ 30ವರ್ಷ, ಪುರುಷ/ಮಹಿಳೆಯರಿಗೆ 31 ವರ್ಷದ ಮೇಲೆ ಇರುವವರು ಸ್ಪರ್ಧಿಸಬಹುದಾಗಿದೆ. ವಿಜೇತರಿಗೆ ನಗದು ಬುಹುಮಾನದ ಜೊತೆಗೆ ಸ್ಮರಣೆಕೆ ಹಾಗೂ ಪ್ರಮಾಣ ಪತ್ರ ವಿತರಿಸಲಾಗುವುದು.

‘ಬನ್ನಿ ಮಣ್ಣಿನೊಟ್ಟಿಗೆ ಮಕ್ಕಳಾಗೋಣ’ಎಂಬ ಸಂದೇಶದೊಂದಿಗೆ ಗ್ರಾಮೀಣಾ ಕ್ರೀಡೆಯಾದ ಕೆಸರುಗದ್ದೆ ಆಟೋಟ ಹಾಗೂ ಕೆಸರು ಗದ್ದೆ ಹಗ್ಗ ಜಗ್ಗಾಟ ಹಾಗೂ ಕೆಸರುಗದ್ದೆ ಓಟ ಸ್ಪರ್ಧೆಗಳನ್ನು ಸೆಪ್ಟಂಬರ್ 25 ರಂದು ಶ್ರೀರಂಗಪಟ್ಟದ ಕೆ.ಶೆಟ್ಟಿಹಳ್ಳಿಯಲ್ಲಿ ಆಯೋಜಿಸಲಾಗಿದೆ. ವಿಜೇತರಿಗೆ ನಗದು ಬುಹುಮಾನದ ಜೊತೆಗೆ ಸ್ಮರಣೆಕೆ ಹಾಗೂ ಪ್ರಮಾಣ ಪತ್ರ ವಿತರಿಸಲಾಗುವುದು.

ನಾಡಕುಸ್ತಿ ಸ್ಪರ್ಧೆಯನ್ನು ಶ್ರೀರಂಗಪಟ್ಟಣದ ಸೆಂಥಿಲ್ ಕೋಟೆ ಆವರಣದಲ್ಲಿ ಸೆಪ್ಟಂಬರ್ 25 ರಂದು ಮಧ್ಯಾಹ್ನ 3 ಗಂಟೆಗೆ ನಡೆಸಲಾಗುತ್ತಿದೆ. ಶ್ರೀರಂಗಪಟ್ಟಣ ತಾಲ್ಲೂಕು  ಹಿರಿಯ ಕುಸ್ತಿಪಟುಗಳ ಸಹಕಾರದಲ್ಲಿ ಒಟ್ಟು ರಾಜ್ಯದ ಪ್ರಖ್ಯಾತ 15 ಜೋಡಿ ಪುರುಷ ಹಾಗೂ 1 ಜೋಡಿ ಮಹಿಳೆಯರ ಕುಸ್ತಿ ನಡೆಯುವುದು. ವಿಜೇತರಿಗೆ ನಗದು ಬುಹುಮಾನದ ಜೊತೆಗೆ ಸ್ಮರಣೆಕೆ ಹಾಗೂ ಪ್ರಮಾಣ ಪತ್ರ ವಿತರಿಸಲಾಗುವುದು.

ಸ್ಪರ್ಧೆಯಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮವಾದದ್ದು. ಸೆಪ್ಟಂಬರ್ 25 ರೊಳಗೆ ಸ್ಪರ್ಧಿಗಳು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಸೈಕ್ಲೋತಾನ್, ಕೆಸರುಗದ್ದೆ ಆಟೋಟಕ್ಕೆ ದೂರವಾಣಿ ಸಂಖ್ಯೆ 9448572795, 9844133283, 9741838473, ನಾಡಕುಸ್ತಿಗೆ ಪೈ ಲಕ್ಷ್ಮಣ ಸಿಂಗ್ ದೂರವಾಣಿ ಸಂಖ್ಯೆ 8197069450, 9663503965 ಸಂಪರ್ಕಿಸುವಂತೆ ಕ್ರೀಡಾ ಸಮಿತಿ ತಿಳಿಸಿದೆ.

(ಎನ್.ಬಿ)

Leave a Reply

comments

Related Articles

error: