
ಮೈಸೂರು
ದಸರಾ ನೋಡಲು ಆಗಮಿಸಿದ ಪ್ರವಾಸಿಗರ ಕಾರಿನ ಗಾಜನ್ನು ಒಡೆದು ಮೊಬೈಲ್ ಎಗರಿಸಿದ ಕಳ್ಳರು
ಮೈಸೂರು,ಸೆ.22:- ದಸರಾ ನೋಡಲು ಆಗಮಿಸಿದ ಪ್ರವಾಸಿಗರ ಕಾರಿನ ಗಾಜನ್ನು ಒಡೆದು ಅದರೊಳಗಿದ್ದ ವಸ್ತುಗಳನ್ನು ಅಪಹರಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಕೊಪ್ಪಳದ ಶ್ರೀನಿವಾಸಪುರದ ಸತೀಶ್, ದಿನೇಶ್ ಮತ್ತವರ ಸ್ನೇಹಿತರು ಒಂಟಿಕೊಪ್ಪಲಿನ ಸರ್ವೀಸ್ ಅಪಾರ್ಟ್ ಮೆಂಟ್ ಒಂದರಲ್ಲಿ ರೂಮನ್ನು ಬಾಡಿಗೆಗೆ ಪಡೆದಿದ್ದರು. ದಸರಾ ನೋಡಲು ಆಗಮಿಸಿದ್ದ ಇವರು ಕಾರನ್ನು ಹೊರಗಡೆ ಪಾರ್ಕ್ ಮಾಡಿ ಬಂದಿದ್ದರು. ಈ ವೇಳೆ ಹೋಂಡಾ ಆಕ್ಟಿವಾ ಕಾರಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಾರಿನ ಗಾಜನ್ನು ಒಡೆದು ಕಾರಿನಲ್ಲಿದ್ದ ಮೊಬೈಲ್, ಜರ್ಕಿನ್ ಮತ್ತು ಎರಡೂವರೆ ಸಾವಿರ ರೂ.ನಗದನ್ನು ಕದ್ದೊಯ್ದಿದ್ದಾರೆ. ಅವರು ಹೋಂಡಾ ಆಕ್ಟಿವಾದಲ್ಲಿ ಬಂದಿರುವುದು ಅಪಾರ್ಟ್ ಮೆಂಟ್ ನಲ್ಲಿ ಅಳವಡಿಸಲಾದ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಕುರಿತು ವಿವಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ಕೆ.ಎಸ್,ಎಸ್.ಎಚ್)