ಕರ್ನಾಟಕ

ರೈತರಿಗೆ ತೆಂಗಿನ ಸಸಿ ವಿತರಣೆ

ಮಂಡ್ಯ, ಸೆ.22: ಸಹಾಯಕ ತೋಟಗಾರಿಕೆ ನಿರ್ದೇಶಕರು, ಮಂಡ್ಯ ಕಛೇರಿಯ ಅಧೀನದ ಪುರ ತೋಟಗಾರಿಕೆ ಕ್ಷೇತ್ರ ಹಾಗೂ ದುದ್ದ ತೋಟಗಾರಿಕೆ ಕ್ಷೇತ್ರದಲ್ಲಿ ಲಭ್ಯವಿರುವ ಎತ್ತರ ತಳಿಯ ತೆಂಗಿನ ಸಸಿಗಳನ್ನು ಮಂಡ್ಯ ತಾಲ್ಲೂಕಿನ ರೈತರಿಗೆ ಇಲಾಖಾ ದರ ರೂ. 50ರಂತೆ ನೀಡಲಾಗುವುದು. ಖರೀದಿಸಿದ ಸಸಿಗಳಿಗೆ ಇಲಾಖಾ ಯೋಜನೆಗಳಡಿ ಮಾರ್ಗಸೂಚಿಯನ್ವಯ ಸಹಾಯಧನವನ್ನು ನೀಡಲಾಗುವುದು.

ಆಸಕ್ತ ರೈತರುಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಮಂಡ್ಯ ಕಛೇರಿಯಲ್ಲಿ ಸೆಪ್ಟೆಂಬರ್ 25 ರಂದು ಬೆಳಿಗ್ಗೆ 10 ಗಂಟೆಗೆ ಆರ್.ಟಿ.ಸಿ, ಆಧಾರ್ ಕಾರ್ಡ್ ಹಾಜರುಪಡಿಸಿ ಟೋಕನ್ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 08232-225735 ಅಥವಾ ಮೊಬೈಲ್ ಸಂಖ್ಯೆ: 9916874792 ಅನ್ನು ಸಂಪರ್ಕಿಸಬಹುದು.

(ಎನ್.ಬಿ)

Leave a Reply

comments

Related Articles

error: