ಸುದ್ದಿ ಸಂಕ್ಷಿಪ್ತ

ಅಧ್ಯಯನ ವರದಿ ಬಿಡುಗಡೆ

ಮೈಸೂರಿನ ಅಶೋಕಪುರಂ ಅರಣ್ಯಭವನದ ಸಭಾಂಗಣದಲ್ಲಿ ನವೆಂಬರ್ 3ರಂದು ಸಂಜೆ 4.30ಕ್ಕೆ ಮೈಸೂರು ನಂಜನಗೂಡು ಸ್ಥಳೀಯ ಯೋಜನಾ ಪ್ರದೇಶದಲ್ಲಿನ ಕೆರೆಗಳ ಸುಸ್ಥಿರ ಸಂರಕ್ಷಣಾ ಕಾರ್ಯತಂತ್ರಗಳನ್ನು ರೂಪಿಸುವುದರ ಕುರಿತು ಅಧ್ಯಯನ ವರದಿಯ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಅರಣ್ಯ ಸಚಿವ ಬಿ.ರಮಾನಾಥ ರೈ ವರದಿಯನ್ನು ಬಿಡುಗಡೆಗೊಳಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್,  ಶಾಸಕ ಎಂ.ಕೆ.ಸೋಮಶೇಖರ್, ಮೇಯರ್ ಬಿ.ಎಲ್.ಭೈರಪ್ಪ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

Leave a Reply

comments

Related Articles

error: