
ಮಂಡ್ಯ, ಸೆ.22 : ಎಸ್.ಎಲ್.ವಿ ದೋಸೆ ಕ್ಯಾಂಪ್ ಹೋಟೆಲ್ ಹಿಂಭಾಗ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯು ಸುಮಾರು 50 ರಿಂದ 55 ವರ್ಷ ವಯಸ್ಸಿನವರಾಗಿದ್ದು ಅವರ ವಿಳಾಸ ಪತ್ತೆಯಾಗಿರುವುದಿಲ್ಲ. ಮೃತನು 162 ಸೆಂ.ಮೀ ಎತ್ತರ ಹೊಂದಿದ್ದು, ಕೋಲು ಮುಖ, ಎಣ್ಣೆಗೆಂಪು ಬಣ್ಣ, ಎಡಗೈನಲ್ಲಿ ಹಾವಿನ ಹಚ್ಚೆ, ಬಲಗೈ ಮೇಲೆ ವಾಣಿ ಎಂಬ ಹೆಸರಿನ ಹಚ್ಚೆ ಹೊಂದಿದ್ದು, ಕಪ್ಪು ಬಣ್ಣದ ಬಟ್ಟೆ ಧರಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಮಂಡ್ಯ ಪೂರ್ವ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ತಿಳಿಸಿದೆ.
(ಎನ್.ಬಿ)