ಮೈಸೂರು

ಕೆ.ಆರ್.ನಗರ ತಾಲೂಕಿನಲ್ಲಿ ಹೊಸ ಕಂದಾಯ ಗ್ರಾಮ ರಚನೆ : ಅಧಿಸೂಚನೆ ಪ್ರಕಟಣೆ

ಮೈಸೂರು. ಸೆ, 22 : ಕೆ.ಆರ್.ನಗರ ತಾಲ್ಲೂಕಿನ ಕಸಬಾ ಹೋಬಳಿಯ ಮಾರ್ಚಹಳ್ಳಿ ಎಂಬ ಕಂದಾಯ ಗ್ರಾಮದಿಂದ ಬೇರ್ಪಡಿಸಿ ಶಿವಪುರ ಎಂಬ ದಾಖಲೆ ಗ್ರಾಮವನ್ನು ಸರ್ಕಾರದ ಅಂತಿಮ ಅಧಿಸೂಚನೆ ಸಂಖ್ಯೆ No. RD 30 BHUDAPU 2011 16-11-2013ರ ಅನುಸಾರ ಹೊಸದಾಗಿ ಕಂದಾಯ ಗ್ರಾಮವನ್ನು ರಚಿಸಲು ಅಧಿಸೂಚನೆ ಹೊರಡಿಸಲಾಗಿದೆ.

ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂ-ದಾಖಲೆಗಳ ಉಪನಿರ್ದೇಶಕರು ಮೈಸೂರು ಜಿಲ್ಲೆ, ಮೈಸೂರು ಇವರು ಈ ರೀತಿ ಬೇರ್ಪಡಿಸಿದ ಗ್ರಾಮಕ್ಕೆ ಭೂ ದಾಖಲೆಗಳನ್ನು ಪ್ರತ್ಯೇಕಿಸಿ ಎರಡು ಗ್ರಾಮಗಳಿಗೆ ಆರ್.ಟಿ.ಸಿ. ರಚಿಸಲು ಅನುಮೋದನೆ ನೀಡಿರುತ್ತಾರೆ.

ಅದರಂತೆ ಮೂಲ ಗ್ರಾಮವಾದ ಮಾರ್ಚಹಳ್ಳಿಯಿಂದ ಬೇರ್ಪಟ್ಟ ಶಿವಪುರ ಎಂಬ ಹೊಸ ಕಂದಾಯ ಗ್ರಾಮಕ್ಕೆ ಒಟ್ಟು 184 ಸರ್ವೆ ನಂಬರ್‍ಗಳಿಂದ 231.38 ಎಕರೆ ವಿಸ್ತೀರ್ಣ ಕೃಷಿ ಭೂಮಿ ಎಂದು ಗುರುತಿಸಲಾಗಿರುತ್ತದೆ ಹಾಗೂ ಈ ಹಿಂದೆ ಗ್ರಾಮ ಠಾಣದಲ್ಲಿಯೇ ಇದ್ದ ವಡ್ಡರಹಳ್ಳಿ ಎಂಬ ಗ್ರಾಮವನ್ನು ಹೊಸದಾಗಿ ರಚಿಸಲಾಗಿರುವ ಗ್ರಾಮಕ್ಕೆ ಶಿವಪುರ ಎಂದು ನಾಮಕರಣ ಮಾಡಿ ಘೋಷಿಸಲಾಗಿರುತ್ತದೆ ಹಾಗೂ ಭೂ ದಾಖಲೆಗಳನ್ನು ಬೇರ್ಪಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಹೊಸ ಗ್ರಾಮಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶಿಸಲಾಗಿರುತ್ತದೆ ಎಂದು ತಹಶೀಲ್ದಾರ್ ಅವರು ತಿಳಿಸಿದ್ದಾರೆ.

(ಎನ್.ಬಿ)

Leave a Reply

comments

Related Articles

error: