ಸುದ್ದಿ ಸಂಕ್ಷಿಪ್ತ

ಸಾಹಿತ್ಯಿಕ –ಸಾಂಸ್ಕೃತಿಕ ಸ್ಪರ್ಧೆ

ಮೈಸೂರು ವಿಶ್ವವಿದ್ಯಾನಿಲಯದ ಕ್ಷೇಮಪಾಲನಾ ಕಚೇರಿ ವತಿಯಿಂದ 2016-17ನೇ ಸಾಲಿನ ಅಂತರ ಕಾಲೇಜು ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ನವೆಂಬರ್ 3, 4 ಮತ್ತು 5ರಂದು ಹಮ್ಮಿಕೊಳ್ಳಲಾಗಿದೆ.

ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ನವೆಂಬರ್ 3ರಂದು ಬೆಳಿಗ್ಗೆ 11ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಚಲನಚಿತ್ರ ನಟ, ಭರತನಾಟ್ಯ ಕಲಾವಿದ ಶ್ರೀಧರ್ ಉದ್ಘಾಟಿಸಲಿದ್ದಾರೆ. ಕಿರುತೆರೆ-ಹಿರಿತೆರೆ ನಟಿ ವಾಣಿಶ್ರೀ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಕುಲಪತಿ ಪ್ರೊ.ರಂಗಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. 26ವಿವಿಧ ಸ್ಪರ್ಧೆಗಳನ್ನು ಮಾನಸಗಂಗೋತ್ರಿಯ ಮಾನವಿಕ ಸಭಾಂಗಣ, ಇ.ಎಂ.ಆರ್.ಸಿ ಸಭಾಂಗಣ, ಭೌತಶಾಸ್ತ್ರ ವಿಭಾಗದ ಐನ್ ಸ್ಟೇನ್ ಸಭಾಂಗಣ, ಲಲಿತಕಲೆಗಳ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

Leave a Reply

comments

Related Articles

error: