ಪ್ರಮುಖ ಸುದ್ದಿಮೈಸೂರು

ಎತ್ತಿನ ಗಾಡಿಯನ್ನು ಓಡಿಸುವ ಮೂಲಕ ರೈತ ದಸರಾ ಮೆರವಣಿಗೆಗೆ ಚಾಲನೆ

ಮೈಸೂರು,ಸೆ.22:-ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಇಂದಿನಿಂದ  ಅಂದರೆ ಸೆ.22ರಿಂದ 24ರವರೆಗೆ ಮೂರು ದಿನಗಳ ಕಾಲ ಜೆ.ಕೆ.ಮೈದಾನದಲ್ಲಿ ರೈತ ದಸರಾ ನಡೆಯಲಿದ್ದು, ಶುಕ್ರವಾರ ಅರಮನೆ ಮುಂಭಾಗ ಕೋಟೆ ಆಂಜನೇಯಸ್ವಾಮಿ ಮುಂಭಾಗ ರೈತ ದಸರಾ ಮೆರವಣಿಗೆಗೆ ಚಾಲನೆ ನೀಡಲಾಯಿತು.

ರೈತರಿಗೆ ಉಪಯುಕ್ತವಾಗುವ ನೀರು ಸಂರಕ್ಷಣೆ, ತೋಟಗಾರಿಕೆ ಇಲಾಖೆ, ಕೃಷಿ ಅಭಿಯಾನ, ಕ್ಷೀರ ಭಾಗ್ಯ, ಮೀನುಗಾರಿಕೆ ಇಲಾಖೆಗಳ ಸ್ತಬ್ಧ ಚಿತ್ರಗಳು, ಎತ್ತಿನ ಗಾಡಿ,ಸಾಕು ಪ್ರಾಣಿಗಳಾದ ಕುರಿ ಸೇರಿದಂತೆ ನಂದಿ ಕಂಬ, ಪೂರ್ಣ ಕುಂಭ ಹೊತ್ತ ಮಹಿಳೆಯರು, ಸಾಂಸ್ಕೃತಿಕ ಕಲಾ ತಂಡಗಳು ಆಕರ್ಷಣೀಯವಾಗಿದ್ದು ಗಮನ ಸೆಳೆದವು.

ಎತ್ತಿನ ಗಾಡಿಯನ್ನು ಓಡಿಸುವ ಮೂಲಕ ಮೇಯರ್ ಎಂ.ಜೆ.ರವಿಕುಮಾರ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಈ ಬಾರಿಯ ದಸರಾ ಮಹೋತ್ಸವವನ್ನು ರೈತದಸರಾ ಎಂದು ಘೋಷಣೆ ಮಾಡಬೇಕೆಂದು ತಿಳಿಸಿದರು.  ಕಳೆದ 15 ದಿನಗಳಿಂದ ರಾಜ್ಯಾದ್ಯಂತ ಉತ್ತಮ ಮಳೆಯಾದ್ದರಿಂದ ಈ ವೇಳೆಯಲ್ಲಿ ಈ ದಸರಾವನ್ನು ರೈತರಿಗೆ ಸಮರ್ಪಿಸಬೇಕೆಂದು ತಿಳಿಸಿದರು.

ವಿವಿಧ ಕಲಾತಂಡಗಳಿಂದ ಮೆರವಣಿಗೆ ಸಾಗಿ ನಂತರ  ಜೆ.ಕೆ.ಮೈದಾನದಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ತೆರಳಿದರು. ಈ ಸಂದರ್ಭ ರೈತ ದಸರಾ ಸಮಿತಿಯ ಅಧ್ಯಕ್ಷ ಪುಟ್ಟಸ್ವಾಮಿ, ಕಾರ್ಯಾಧ್ಯಕ್ಷರಾದಕೆ.ಎಂ.ಸೋಮಸುಂದರ್, ಉಪಾಧ್ಯಕ್ಷರಾದ ರಮೇಶ್, ಮಹದೇವ, ಕೆ.ವಿ.ಮಲ್ಲೇಶ್, ಹಿರೇಹಳ್ಳಿ ಸೋಮೇಶ್ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: