ಕರ್ನಾಟಕಪ್ರಮುಖ ಸುದ್ದಿ

ಸೆ.22-24ವರೆಗೆ ಕೆಎಚ್‍ಬಿ ಫ್ಲಾಟ್ ಪ್ರಾಪರ್ಟಿ ಎಕ್ಸ್’ಪೋ : ಮಾಲಿಕಯ್ಯ ಗುತ್ತೇದಾರ್

ಬೆಂಗಳೂರು, ಸೆ.22 (ಪ್ರಮುಖ ಸುದ್ದಿ) : ಬೆಂಗಳೂರಿನಲ್ಲಿ ಕರ್ನಾಟಕ ಗೃಹ ಮಂಡಳಿ ನಿರ್ಮಿಸಿರುವ ಬಹುಮಹಡಿ ಸಮುಚ್ಚಯಗಳ ಫ್ಲಾಟ್‍ಗಳನ್ನು ಸ್ಥಳದಲ್ಲಿಯೇ ಹಂಚಿಕೆ ಮಾಡಲು ಸೆಪ್ಟೆಂಬರ್ 22 ರಿಂದ 24ರ ವರೆಗೆ ಮೂರು ದಿನಗಳ Property Expo ಮೇಳವನ್ನು ಕೆಂಗೇರಿ ಉಪನಗರದಲ್ಲಿನ ಕೆಹೆಚ್‍ಬಿ-ಪ್ಲಾಟಿನಂ ಕ್ಲಬ್‍ಹಾಸ್‍ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷರು ಮಾಲಿಕಯ್ಯ ಗುತ್ತೇದಾರ್ ತಿಳಿಸಿದರು.

ಕರ್ನಾಟಕ ಗೃಹ ಮಂಡಳಿಯ ಕೇಂದ್ರ ಕಛೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಗೃಹ ಮಂಡಳಿಯು ಬೆಂಗಳೂರಿನ ಕೆಂಗೇರಿ ಉಪನಗರ ಬಂಡೇಮಠದಲ್ಲಿ ಹಾಗೂ ಸೂರ್ಯನಗರದಲ್ಲಿ ಸುಸಜ್ಜಿತವಾದ ಹಾಗೂ ಮೂಲಸೌಕರ್ಯಗಳನ್ನೊಳಗೊಂಡ ವಿವಿಧ ವರ್ಗದ ಫ್ಲಾಟ್‍ಗಳನ್ನು ನಿರ್ಮಿಸಿದ್ದು, ಫ್ಲಾಟ್‍ಗಳಲ್ಲಿ ಈಗಾಗಲೇ ಕೆಲವು ಫ್ಲಾಟ್‍ಗಳನ್ನು ಹಂಚಿಕೆ ಮಾಡಲಾಗಿರುತ್ತದೆ.

ಕೆಂಗೇರಿ ಉಪನಗರದಲ್ಲಿನ ಫ್ಲಾಟಿನಂ ಬಹುಮಹಡಿ ಕಟ್ಟಡದಲ್ಲಿ ಒಟ್ಟು 808 ವಿವಿಧ ವರ್ಗದ ಫ್ಲಾಟ್‍ಗಳನ್ನು ನಿರ್ಮಿಸಿದ್ದು, 397 ಫ್ಲಾಟ್‍ಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ. ಪ್ರಸ್ತುತ 411 ಫ್ಲಾಟ್‍ಗಳು ಹಂಚಿಕೆಗೆ ಲಭ್ಯವಿರುತ್ತವೆ.

ಕೆಂಗೇರಿ ಬಂಡೇಮಠ ಬಡಾವಣೆಯಲ್ಲಿನ ಡೈಮೆಂಡ್ ಬಹುಮಹಡಿ ಕಟ್ಟಡದಲ್ಲಿ ಒಟ್ಟು 306 ವಿವಿಧ ವರ್ಗದ ಫ್ಲಾಟ್‍ಗಳನ್ನು ನಿರ್ಮಿಸಿದ್ದು, 110 ಫ್ಲಾಟ್‍ಗಳನ್ನು ಈಗಾಗಲೇ ಹಂಚಿಕೆ ಮಾಡಿದ್ದು, ಪ್ರಸ್ತುತ 206 ಫ್ಲಾಟ್‍ಗಳು ಹಂಚಿಕೆಗೆ ಲಭ್ಯವಿರುತ್ತವೆ. ಸೂರ್ಯನಗರ 1ನೇ ಹಂತದ ಬಡಾವಣೆಯಲ್ಲಿನ ಸೂರ್ಯ ಎಲಿಗೆನ್ಸ್ ಬಹುಮಹಡಿ ಕಟ್ಟಡದಲ್ಲಿ ಒಟ್ಟು 384 ವಿವಿಧ ವರ್ಗದ ಫ್ಲಾಟ್‍ಗಳನ್ನು ನಿರ್ಮಿಸಿದ್ದು, 58 ಫ್ಲಾಟ್‍ಗಳನ್ನು ಈಗಾಗಲೇ ಹಂಚಿಕೆ ಮಾಡಿದ್ದು, ಪ್ರಸ್ತುತ 326 ಫ್ಲಾಟ್‍ಗಳು ಹಂಚಿಕೆಗೆ ಲಭ್ಯವಿರುತ್ತವೆ.

ಉತ್ತಮ ಗುಣಮಟ್ಟದ ಫ್ಲಾಟ್‍ಗಳು ನೀರು, ವಿದ್ಯುತ್, ಒಳಚರಂಡಿ ಹಾಗೂ ಸಕಲ ಸೌಲಭ್ಯಗಳನ್ನು ಒಳಗೊಂಡಿರುತ್ತವೆ. ಫ್ಲಾಟ್‍ಗಳು ಕೂಡಲೇ ವಾಸಕ್ಕೆ ಸಿದ್ದವಿರುತ್ತವೆ. ಫ್ಲಾಟಿನಂ ಮತ್ತು ಸೂರ್ಯ ಎಲಿಗೆನ್ಸ್ ಬಹುಮಹಡಿ ಕಟ್ಟಡಗಳಲ್ಲಿ ಈಜುಕೊಳ ಹಾಗೂ ಕ್ಲಬ್ ಹೌಸ್ ಹೆಚ್ಚಿನ ಸೌಲಭ್ಯಗಳನ್ನು ಒಳಗೊಂಡಿರುತ್ತವೆ ಎಂದು ತಿಳಿಸಿದರು.

ಪಾಪರ್ಟಿ ಎಕ್ಸ್‍ಪೋ ದಸರಾ ವಿಶೇಷ ಕೊಡುಗೆಯೆಂದು ಶೇ. 2ರಷ್ಟು ವಿಶೇಷ ರಿಯಾಯಿತಿ ನೀಡಿ ಸ್ಥಳದಲ್ಲಿಯೇ ಸಾರ್ವಜನಿಕರು ಇಚ್ಛಿಸುವ ಫ್ಲಾಟ್‍ಗಳನ್ನು ಕೈಗೆಟಕುವ ದರದಲ್ಲಿ ಹಂಚಿಕೆ ಮಾಡಿ ಹಂಚಿಕೆ ಪತ್ರವನ್ನು ನೀಡಲಾಗುವುದು ಎಂದು ಕರ್ನಾಟಕ ಗೃಹ ಮಂಡಳಿಯ ಆಯುಕ್ತರಾದ ಎ.ಬಿ ಇಬ್ರಾಹಿಂ ರವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಂ ನಲ್ಲಿ ಖರೀದಿಸಲು ನೀಡಲಾಗಿರುವ ಸಾಲ ಸೌಲಭ್ಯಗಳನ್ನು ಫ್ಲಾಟ್ ಖರೀದಿಸುವ ಗ್ರಾಹಕರಿಗೆ ಬ್ಯಾಂಕ್ ಸಾಲ ಪಡೆಯಲು ಕರ್ನಾಟಕ ಗೃಹ ಮಂಡಳಿಯಿಂದ ಖಾತ್ರಿಯನ್ನು ನೀಡಲಾಗುವುದು. ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ರೂ.3.00 ಲಕ್ಷದೊಳಗಡೆ ವಾರ್ಷಿಕ ಆದಾಯ ಹೊಂದಿರುವ ಅರ್ಜಿದಾರರು ಒಂದು ಬಿ.ಹೆಚ್.ಕೆ. ಫ್ಲಾಟ್ ಅನ್ನು ಬ್ಯಾಂಕ್ ಸಾಲದ ಮುಖಾಂತರ ಖರೀದಿಸಿದಲ್ಲಿ, ಕೇಂದ್ರ ಸರ್ಕಾರದಿಂದಲೂ 1.5 ಲಕ್ಷಗಳಷ್ಟು ಸಹಾಯಧನ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅರ್ಜಿದಾರರಿಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರದ ವತಿಯಿಂದ ರೂ.1.80 ಲಕ್ಷಗಳಷ್ಟು ವಿಶೇಷ ಸಹಾಯಧನ ಪಡೆಯಲು ಅವಕಾಶವಿರುತ್ತದೆ ಎಂದು ಕರ್ನಾಟಕ ಗೃಹ ಮಂಡಳಿಯ ಕಾರ್ಯದರ್ಶಿಗಳಾದ ದಯಾನಂದ್ ಭಂಡಾರಿ ಅವರು ತಿಳಿಸಿದರು.

ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ರೂ.18.00 ಲಕ್ಷದವರೆಗೆ ವಾರ್ಷಿಕ ಆದಾಯ ಹೊಂದಿರುವ ಅರ್ಜಿದಾರರು ಬ್ಯಾಂಕ್ ಸಾಲದ ಮುಖಾಂತರ ಫ್ಲಾಟ್ ಖರೀದಿಸಿದಲ್ಲಿ, ಗರಿಷ್ಠ ರೂ. 2.67 ಲಕ್ಷದವರೆಗೆ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಂ (ಅಐSS) ಅಡಿ ಬಡ್ಡಿಯಲ್ಲಿ ವಿಶೇಷ ರಿಯಾಯಿತಿ ಪಡೆಯಲು ಅವಕಾಶವಿರುತ್ತದೆ ಎಂದರು.

(ಎನ್.ಬಿ)

Leave a Reply

comments

Related Articles

error: