
ಕರ್ನಾಟಕಪ್ರಮುಖ ಸುದ್ದಿ
ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಅಳಿಯನ ನಿವಾಸದ ಮೇಲೆ ಮುಂದುವರೆದ ಐಟಿ ದಾಳಿ
ರಾಜ್ಯ(ಬೆಂಗಳೂರು)ಸೆ.22:- ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ಅವರ ನಿವಾಸ ಹಾಗೂ ಕಂಪನಿಗಳ ಮೇಲೆ 2ನೇ ದಿನವೂ ಸಹ ಐಟಿ ಅಧಿಕಾರಿಗಳ ದಾಳಿ ಮುಂದುವರೆದಿದೆ.
ಚಿಕ್ಕಮಗಳೂರು ನಗರದಲ್ಲಿರುವ ಕಾಫಿ ಡೇ ಗ್ಲೋಬಲ್ ಲಿಮಿಟೆಡ್, ಮೂಡಿಗೆರೆಯಲ್ಲಿರುವ ಮನೆ ಹಾಗೂ ಎಸ್ಟೇಟ್ ಕಚೇರಿಗಳಲ್ಲಿ ಐಟಿ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದರು. ಬೆಂಗಳೂರಿನ ಸದಾಶಿವನಗರದಲ್ಲಿರುವ ಸಿದ್ದಾರ್ಥ್ ಅವರ ನಿವಾಸದ ಮೇಲೂ ದಾಳಿ ನಡೆದಿತ್ತು. ಶುಕ್ರವಾರ ಸಹ ದಾಳಿ ಮುಂದುವರೆದಿದ್ದು, ಐಟಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
10ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ನಿನ್ನೆಯಿಂದ ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ. ಈ ನಡುವೆ ನಿನ್ನೆ ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರ ಆಪ್ತ ರಜಿನೀಶ್ ಅವರ ಕಚೇರಿಯ ಮೇಲೂ ಐಟಿ ದಾಳಿ ನಡೆಸಿತ್ತು. (ಕೆ.ಎಸ್,ಎಸ್.ಎಚ್)