ಮೈಸೂರು

ಆದೇಶ ಗಾಳಿಗೆ ತೂರಿ ನಡೆದಿದೆ ಗೌಜಲಕ್ಕಿ ಕಾಳಗ

ಮೈಸೂರು,ಸೆ.22:- ಸರ್ಕಾರದ ಆದೇಶ ಗಾಳಿಗೆ ತೂರಿ ಗೌಜಲಕ್ಕಿ ಕಾಳಗ ನಡೆದಿದೆ. ಮೈಸೂರು ಜಿಲ್ಲೆ ತಿ.ನರಸೀಪುರ ಸಮೀಪದ ಶ್ರೀ ಕಾಡುಬಸವೇಶ್ವರಸ್ವಾಮಿ ದೇಗುಲದ ಸಮೀಪ ಕಳೆದ ಅಡ್ಡರಸ್ತೆಯಲ್ಲಿ ಗೌಜಲಕ್ಕಿ ಕಾಳಗ ನಡೆಸಲಾಗಿದೆ.

ಪ್ರತಿ ಅಮಾವಾಸ್ಯೆ ಸಂದರ್ಭದಲ್ಲಿ ಗೌಜಲಕ್ಕಿ ಕಾಳಗ ನಡೆಸಿ ಬೆಟ್ಟಿಂಗ್ ನಡೆಸುತ್ತಿದ್ದು, ಚಾಮರಾಜನಗರ, ನಂಜನಗೂಡು, ತಿ.ನರಸೀಪುರ  ವ್ಯಾಪ್ತಿಯ ರೈತರು ಗೌಜಲಕ್ಕಿ ಕಾಳಗದಲ್ಲಿ ಪಾಲ್ಗೊಳ್ಳುತ್ತಾರೆ. ಕೆಲವರು ಇದನ್ನು ಹವ್ಯಾಸ ಮಾಡಿಕೊಂಡು ಹಣದ ದಂಧೆಯಲ್ಲಿ ತೊಡಗಿದ್ದು,ಸರ್ಕಾರಿ ನಿಯಮವನ್ನು ಗಾಳಿಗೆ ತೂರಿ ಗೌಜಲಕ್ಕಿ ಕಾಳಗ ನಡೆಸಲಾಗಿದೆ. ಈ ಬಗ್ಗೆ ಸ್ಥಳೀಯ ಪೋಲಿಸರಿಗೆ ಮಾಹಿತಿ ಇದ್ದರೂ ಅಧಿಕಾರಿಗಳು ಕ್ರಮವಹಿಸುತ್ತಿಲ್ಲ. ತಿ. ನರಸೀಪುರ ಹಾಗೂ ನಂಜನಗೂಡು ವ್ಯಾಪ್ತಿಯ ಗ್ರಾಮಗಳಲ್ಲಿ ಇಂದಿಗೂ ಗೌಜಲಕ್ಕಿ ಸಾಕಾಣಿಕೆ ನಿರಂತರವಾಗಿದೆ ಎಂದು ಹೇಳಲಾಗುತ್ತಿದೆ. (ಆರ್.ವಿ,ಎಸ್.ಎಚ್)

Leave a Reply

comments

Related Articles

error: