ಕ್ರೀಡೆ

ಜಪಾನ್ ಸೂಪರ್ ಸೀರಿಸ್‍ನಿಂದ ಹೊರಬಂದ ಸಿಂಧು

ಟೋಕಿಯೋ,ಸೆ.22: ಜಪಾನ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಎರಡನೇ ಸುತ್ತಿನಲ್ಲಿ ಪಿ.ವಿ.ಸಿಂಧು ಸೋಲುವ ಮೂಲಕ ಟೂರ್ನಿಯಿಂದ ನಿರ್ಗಮಿಸಿದ್ದಾರೆ.

ಗ್ಲಾಸ್ಗೋ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಿ.ವಿ.ಸಿಂಧು ಒಕುಹಾರ ವಿರುದ್ಧ ಸೋತಿದ್ದರು.  ಇದರ ಪ್ರತಿಕಾರವಾಗಿ ಸಿಂಧು ಕೊರಿಯಾದಲ್ಲಿ ನಡೆದ ಟೂರ್ನಿಯಲ್ಲಿ ಸೇಡು ತೀರಿಸಿಕೊಂಡು ಪ್ರಶಸ್ತಿ ಗೆದ್ದಿದ್ದರು. ಆದರೆ ಗುರುವಾರ ಸಿಂಧು ಅವರನ್ನು ಒಕುಹಾರ ಸೋಲಿಸಿದ್ದಾರೆ. ಈ ಪಂದ್ಯದಲ್ಲಿ ಸೋತರೂ ಸಿಂಧು  ಬ್ಯಾಡ್ಮಿಂಟನ್ ರ‍್ಯಾಂಕಿಂಗ್‌ ನಲ್ಲಿ ಜೀವನ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಕೊರಿಯಾ ಓಪನ್ ಗೆಲ್ಲುವ ಮೂಲಕ 4ನೇ ಸ್ಥಾನದಲ್ಲಿದ್ದ ಸಿಂಧು ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ. ಒಕುಹಾರ 1 ಸ್ಥಾನ ಜಿಗಿದು 8ನೇ ಸ್ಥಾನ ಪಡೆದುಕೊಂಡಿದ್ದಾರೆ. (ವರದಿ: ಪಿ.ಜೆ)

Leave a Reply

comments

Related Articles

error: