ಕರ್ನಾಟಕ

ಬೆಂಗಳೂರು ಅರಮನೆ ರಸ್ತೆ ಕಚೇರಿಯಲ್ಲಿ ಅಂಚೆ ಅದಾಲತ್

ಬೆಂಗಳೂರು, ಸೆ.22 : ಬೆಂಗಳೂರು ನಗರ ಹಾಗೂ ಗ್ರಾಮೀಣ ವ್ಯಾಪ್ತಿಗೆ ಸಂಬಂಧಪಟ್ಟ ಅಂಚೆ ಸೇವೆಗಳ ಕುಂದುಕೊರತೆಗಳು, ಅಹವಾಲುಗಳನ್ನು ಪರಿಹರಿಸಲು ಅಂಚೆ ಅದಾಲತ್ (ಡಾಕ್ ಅದಾಲತ್) ಅನ್ನು ಅಕ್ಟೋಬರ್ 4 ರಂದು ಮಧ್ಯಾಹ್ನ 3.00 ಗಂಟೆಗೆ ಆಯೋಜಿಸಲಾಗಿದೆ.

ಮುಖ್ಯ ಪೋಸ್ಟ್’ಮಾಸ್ಟರ್ ಜನರಲ್, ಕರ್ನಾಟಕ ಅಂಚೆ ವಲಯ, ನಂ.1, ಅರಮನೆ ರಸ್ತೆ, (ಮಹಾರಾಣಿ ವಿಜ್ಞಾನ ಕಾಲೇಜು ಎದರುರು), ಬೆಂಗಳೂರು – 560001 ಕಾರ್ಯಾಲಯದಲ್ಲಿ ಅದಾಲತ್ ನಡೆಯಲಿದೆ.

ಸಾರ್ವಜನಿಕರು ತಮ್ಮ ಅಂಚೆ ಸೇವೆಗಳ ಕುಂದು ಕೊರತೆಗಳನ್ನು ತಮ್ಮ ವಿಳಾಸದೊಂದಿಗೆ ತ್ವರಿತ ಪರಿಹಾರಕ್ಕಾಗಿ ಸಹಾಯಕ ನಿದೇಶಕರು (ಪಿ.ಓ) ಮುಖ್ಯ ಪೋಸ್ಟ್’ಮಾಸ್ಟರ್ ಜನರಲ್‍ರವರ ಕಾರ್ಯಾಲಯ, ಕರ್ನಾಟಕ ಅಂಚೆ ವಲಯ, ಬೆಂಗಳೂರು – 560 001 ಇವರಿಗೆ ಸೆಪ್ಟೆಂಬರ್ 25 ರ ಒಳಗಾಗಿ ತಲುಪುವಂತೆ ಕಳುಹಿಸಿಕೊಡಬಹುದಾಗಿದೆ ಅಥವಾ ದೂರವಾಣಿ ಸಂಖ್ಯೆ 080-22392631, 22392543 ಮೂಲಕ ಸಂಪರ್ಕಿಸಬಹುದಾಗಿದೆ.

ಕುಂದುಕೊರತೆಗಳನ್ನು ಇಮೇಲ್ ಮುಖಾಂತರವೂ ಸಹ [email protected] ಗೆ ಕಳುಹಿಸಬಹುದಾಗಿದೆ. ಸಮಸ್ಯೆಗಳನ್ನು ಸಂಕ್ಷಿಪ್ತವಾಗಿ ನಿರ್ದಿಷ್ಟ ಅಂಕಿ ಅಂಶಗಳ ವಿವರಗಳೊಂದಿಗೆ ಕಳುಹಿಸಿಕೊಡಬಹುದಾಗಿದೆ ಎಂದು ತಿಳಿಸಿದೆ.

(ಎನ್.ಬಿ)

Leave a Reply

comments

Related Articles

error: