ಮನರಂಜನೆ

ರೊಮ್ಯಾಂಟಿಕ್ ಸೀನ್ ಗಳಲ್ಲಿ ನಟಿಸಲ್ಲ ಎಂದ ಐಶ್ !

ಮುಂಬೈ, ಸೆ.22: ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಇನ್ನು ಮುಂದೆ ರೊಮ್ಯಾಂಟಿಕ್ ಸೀನ್ ಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದಾರೆ.

ಹೌದು, ನಟಿ ಐಶ್ವರ್ಯ ರೈ  ಈಗ `ಫೆನ್ನಿ ಖಾನ್’ ಸಿನಿಮಾದಲ್ಲಿ  ಅನಿಲ್ ಕಪೂರ್ ಗೆ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ.  ಈ ಸಿನಿಮಾದಲ್ಲಿ ರಾಜ್ ಕುಮಾರ್ ರಾವ್ ಜೊತೆಗೆ ರೊಮ್ಯಾಂಟಿಕ್ ಸೀನ್ ಇದೆಯಂತೆ. ಆದರೆ ಈ ಮುನ್ನ ಐಶ್ ಅವರು ರೊಮ್ಯಾಂಟಿಕ್ ಸೀನ್ ನಲ್ಲಿ ನಟಿಸುವುದಿಲ್ಲ ಎಂದಿದ್ದರು. ಕೆಲವು ಕಡೆ ಮಾತ್ರ ನಟಿಸಲು ಒಪ್ಪಿಗೆ ನೀಡಿದ್ದರು. ಈ ಹಿಂದೆ ‘ಏ ದಿಲ್ ಹೈ ಮುಷ್ಕಿಲ್’ ಸಿನಿಮಾದಲ್ಲಿ ರಣ್ ಬೀರ್ ಮತ್ತು ಐಶ್ವರ್ಯ ಸಖತ್ ಹಾಟ್ ಆಗಿ ನಟಿಸಿದ್ದರು. ಆ ದೃಶ್ಯಗಳು ಭಾರೀ ವಿವಾದಕ್ಕೆ ಕಾರಣವಾಗಿದ್ದವು. ಆ ಸರಣಿ ಬೆಳೆಯಬಾರದು ಎಂದು ರೊಮ್ಯಾಂಟಿಕ್ ಸೀನ್ ಗಳಲ್ಲಿ ನಟಿಸಲ್ಲ ಎಂದಿದ್ದಾರೆ. (ವರದಿ: ಎಲ್.ಜಿ)

Leave a Reply

comments

Related Articles

error: