ಮೈಸೂರು

ನಾಡ ಹಬ್ಬ ದಸರಾದಲ್ಲಿ ಉರ್ದು ಕವಿಗೋಷ್ಠಿ ಮುಶಾಯರ ಸೆ.26.ಕ್ಕೆ

ಮೈಸೂರು,ಸೆ.22 : ನಾಡ ಹಬ್ಬ ದಸರಾದಲ್ಲಿ ಇದೇ ಪ್ರಥಮ ಬಾರಿಗೆ ಉರ್ದು ಕವಿಗೋಷ್ಠಿಯನ್ನು ಮೈಸೂರು ದಸರಾ ಮುಶಾಯರ ಉಪಸಮಿತಿಯು ಉತ್ತರ ಪ್ರದೇಶದ ಖ್ಯಾತ ಉರ್ದು ಕವಿ ಮೊಹಮದ್ ಇಮ್ರಾನ್ ಉಸ್ತುವಾರಿಯಲ್ಲಿ  ಆಯೋಜಿಸಿದೆ ಎಂದು ಅಲ್ಪ ಸಂಖ್ಯಾತ ಕಲ್ಯಾಣ ಇಲಾಖಾ ಜಿಲ್ಲಾಧಿಕಾರಿ ಎ.ಪುಟ್ಟರಾಜು ತಿಳಿಸಿದರು.

ಬನ್ನಿಮಂಟಪದ ಬಳಿಯ ಗೋಲ್ಡನ್ ಪ್ಯಾಲೇಸ್ ಫಕ್ಷನ್ ಹಾಲ್ ನಲ್ಲಿ ಸೆ. 26ಕ್ಕೆ, ರಾತ್ರಿ 9ಕ್ಕೆ, ನಡೆಯುವ ಉರ್ದು ಕವಿಗೋಷ್ಠಿಯನ್ನು ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಸಚಿವರಾದ ರೋಶನ್ ಬೇಗ್, ತನ್ವೀರ್ ಸೇಠ್ ಮುಶಾಯರವನ್ನು ಉದ್ಘಾಟಿಸುವರು. ಶಾಸಕರಾದ ವಾಸು ಹಾಗೂ ಎಂ.ಕೆ.ಸೋಮಶೇಖರ್, ಜಿಲ್ಲಾಧಿಕಾರಿ ಡಿ.ರಂದೀಪ್ ಕಾರ್ಯಕ್ರಮದಲ್ಲಿ ಭಾಗಿಯಾಗುವರು.  ರಾಜ್ಯ ಸೇರಿದಂತೆ ದೇಶದ ನಾನಾ ಭಾಗಗಳಿಂದ 20ಕ್ಕೂ ಹೆಚ್ಚು ಉರ್ದು ಕವಿಗಳು ಭಾಗವಹಿಸುವರು ಎಂದು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯ ಮತ್ತು ರಾಷ್ಟ್ರಮಟ್ಟದ 20ಕ್ಕೂ ಹೆಚ್ಚು ಖ್ಯಾತ ಉರ್ದು ಕವಿಗಳು ಗೋಷ್ಠಿಯಲ್ಲಿ ಭಾಗವಹಿಸುವರು. ಮುಶಾಯರನ್ನು ಜನಪ್ರಿಯಗೊಳಿಸಲು ನಾಡಹಬ್ಬ ದಸರಾದಲ್ಲಿ ಅವಕಾಶ ಮಾಡಿಕೊಡಲಾಗಿದ್ದು, ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಅಭಿನಂದಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಪಾಲಿಕೆ ಸದಸ್ಯ ಸುಹೇಲ್ ಬೇಗ್, ಸಮಿತಿಯ ಮೊಹಮದ್ ಅಸ್ಲಾಂ, ಆಶ್ರಪ್ ಎ ಮೆಹಕ್ರೀ, ಕಲೀಂ ಪಾಷಾ, ಮೊಯಿನುದ್ದೀನ್ ಪಾಷಾ, ಮೊಹಮದ್ ಮುತಾಜ್ ಅಹ್ಮದ್ ಮೊದಲಾದವರು ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: