ಮೈಸೂರು

ಸೆ.23ಕ್ಕೆ ಬಾನವಿ ಆಸ್ಪತ್ರೆಯ 5ನೇ ವಾರ್ಷಿಕೋತ್ಸವ

ಮೈಸೂರು,ಸೆ.22 : ಕುವೆಂಪು ನಗರದಲ್ಲಿರುವ ಬಾನವಿ ಆಸ್ಪತ್ರೆಯ 5ನೇ ವರ್ಷದ ವಾರ್ಷಿಕೋತ್ಸವವನ್ನು ಸೆ.23ರಂದು ಆಯೋಜಿಸಿದೆ ಎಂದು ಆಸ್ಪತ್ರೆಯ ಡಾ.ಚಂದನ್ ತಿಳಿಸಿದರು.

ನಗರದ ಜಯಮ್ಮ ಗೋವಿಂದೇಗೌಡ ಸಮುದಾಯ ಭವನದಲ್ಲಿ ಸಂಜೆ 5 ಗಂಟೆಗೆ ನಡೆಯುವ ವಾರ್ಷಿಕೋತ್ಸವವನ್ನು ಪಿರಿಯಾಪಟ್ಟಣ ಶಾಸಕ ಕೆ.ವಂಕಟೇಶ್, ನಗರಪಾಲಿಕೆ ಸದಸ್ಯ ಕೆ.ಮಲ್ಲೇಶ್ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ಗೋವಿಂದೇಗೌಡ ಉದ್ಘಾಟಿಸುವರು. ಇದೇ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯ ಸಿಬ್ಬಂಧಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು, ಅಲ್ಲದೇ ವಾರ್ಷಿಕೋತ್ಸವದಂಗವಾಗಿ ಸೆ.24ರಂದು ಬೆಳಗ್ಗೆ 9 ಗಂಟೆಯಿಂದ ರಕ್ತದಾನ ಶಿಬಿರವನ್ನು ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕಳೆದ 4 ವರ್ಷಗಳಿಂದಲೂ ಬಾನವಿ ಆಸ್ಪತ್ರೆ ಉತ್ತಮ ಸೇವೆಯನ್ನು ಒದಗಿಸುವ ಮೂಲಕ 100 ಹಾಸಿಗೆಯುಳ್ಳ ಅತ್ಯಾಧುನಿಕ ಯಂತ್ರೋಪಕರಣಗಳನ್ನೊಳಗೊಂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿದೆ. ಈಗಾಗಲೇ 4 ಸಾವಿರಕ್ಕೂ ಹೆಚ್ಚು ಮಾರಣಾಂತಿಕ ಕಾಯಿಲೆಗಳಿಗೆ ತೀವ್ರ ಘಟಕದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡಿ ಯಶಸ್ವಿಯಾಗಿದೆ ಎಂದು ಹೇಳಿದರು.

ಆಸ್ಪತ್ರೆಯ ಆಡಳಿತ ಮಂಡಳಿಯ ಪ್ರಶಾಂತ್ ಮತ್ತು ನರ್ಸಿಂಗ್ ಸೂಪರಿಂಟೆಂಡ್ ನಿರಂಜನ್ ಸ್ವಾಮಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: