
ವಿದೇಶ
ದೋಣಿ ಮುಳುಗಿ 100 ಕ್ಕೂ ಹೆಚ್ಚು ಮಂದಿ ಸಾವು
ಟ್ರಿಪೋಲಿ, ಸೆ.22: ವಲಸಿಗರನ್ನು ಯುರೋಪ್ಗೆ ಹೊತ್ತೊಯ್ಯುತ್ತಿದ್ದ ದೋಣಿಯೊಂದು ಪಶ್ಚಿಮ ಲಿಬಿಯಾ ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಬಹುತೇಕ ಮಂದಿ ಅಕ್ರಮ ವಲಸಿಗರು ಎಂದು ಲಿಬಿಯಾ ನೌಕಾಪಡೆ ತಿಳಿಸಿದೆ.
ನೌಕಾಪಡೆ ಸಿಬ್ಬಂದಿ ನಿನ್ನೆ ಏಳು ಮಂದಿಯನ್ನು ರಕ್ಷಿಸಿದ್ದಾರೆ. ಅವರು ಎರಡು ದಿನಗಳಿಂದ ಸಮುದ್ರದಲ್ಲಿ ತಾತ್ಕಾಲಿಕ ರಕ್ಷಣಾ ಸಾಧನದೊಂದಿಗೆ ತೇಲುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಿಬಿಯಾದಿಂದ ಅಕ್ರಮ ವಲಸಿಗರು ಸುರಕ್ಷಿತವಲ್ಲದ ನೌಕೆಗಳ ಮೂಲಕ ಮೆಡಿಟರೇನಿಯನ್ ಸಾಗರವನ್ನು ಅಪಾಯಕರ ರೀತಿಯಲ್ಲಿ ದಾಟಿ ಯೂರೋಪ್ಗೆ ಹೋಗುತ್ತಿದ್ದರು ಎನ್ನಲಾಗಿದೆ. (ವರದಿ: ಎಲ್.ಜಿ)