ಮೈಸೂರು

ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿರುವ ಮುಡಾ : ಆರೋಪ

ಮೈಸೂರು,ಸೆ.22 : 90 ದಿನಗಳ ಒಳಗೆ ನಿವೇಶನದ ಹಣ ಪಾವತಿಸಬೇಕೆಂಬ ನಿಯಮವಿದ್ದರು ಮುಡಾ ಈ ನಿಯಮವನ್ನು ಉಲ್ಲಂಘಿಸಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಆರ್.ಕಾಳೇಗೌಡ ದೂರಿದರು.

ನಿವೇಶನ ಕೋರಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಮುಡಾ ನಿವೇಶನ ಮಂಜೂರು ಮಾಡಿ 90 ದಿನಗಳೊಳಗೆ ಹಣ ಪಾವತಿಸುವಂತೆ ಸೂಚಿಸಿರುತ್ತದೆ. ಆದರೆ ಕಾರಣಾಂತರಗಳಿಂದ ಪೂರ್ಣ ಹಣ ಪಾವತಿಸಲಾಗದ ಫಲಾನುಭವಿಗಳಿಗೆ ಇತ್ತ ನಿವೇಶನವನ್ನು ನೀಡದೆ, ಹಣವನ್ನು ವಾಪಸ್ಸು ಮಾಡದೆ ತೊಂದರೆ ನೀಡುತ್ತಿದೆ ಎಂದು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

1986ರಿಂದಲೂ ನಗರದ ವಿವಿಧ ಬಡಾವಣೆಗಳಲ್ಲಿ ಇಂತಹ 2 ಸಾವಿರಕ್ಕೂ ಹೆಚ್ಚು ನಿವೇಶನಗಳು ತಗಾದೆಯಲ್ಲಿದ್ದು ಇದನ್ನು ಬಗೆಹರಿಸಲು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಪ್ರಾಧಿಕಾರವೊಂದನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ, ಆದರೂ ಈ ಆದೇಶವನ್ನು ಸರ್ಕಾರ ಪಾಲಿಸುತ್ತಿಲ್ಲ ಎಂದು ಟೀಕಿಸಿದರು.

ಅತಂತ್ರದಲ್ಲಿರುವ ನಿವೇಶನದಾರರಿಗೆ ಶೀಘ್ರವೇ ನಿವೇಶನ ನೀಡಲು ಹಣ ಕಟ್ಟಿಸಿಕೊಳ್ಳಬೇಕು, ಇಲ್ಲವೇ ಬೇರೆಯವರಿಗೆ ನಿವೇಶನ ಮಂಜೂರು ಮಾಡುವಂತೆ ಒತ್ತಾಯಿಸಿದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: