ಸುದ್ದಿ ಸಂಕ್ಷಿಪ್ತ

ಉದಯಗಿರಿ ಕನ್ನಡ ಸಂಘದ 32ನೇ ವಾರ್ಷಿಕೋತ್ಸವ

ಉದಯಗಿರಿಯಲ್ಲಿರುವ ಉದಯಗಿರಿ  ಕನ್ನಡ ಸಂಘದಲ್ಲಿ ನವೆಂಬರ್ 5ರಂದು ಕನ್ನಡ ರಾಜ್ಯೋತ್ಸವ ಹಾಗೂ ಸಂಘದ 32ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಗುವುದು. ಅಂಕಣಕಾರ ಗುಬ್ಬಿಗೂಡು ರಮೇಶ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮಾಜಿ ಮೇಯರ್ ಸಂದೇಶಸ್ವಾಮಿ ಸನ್ಮಾನಿತರನ್ನು ಅಭಿನಂದಿಸಲಿದ್ದಾರೆ. ಜಾನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದು, ಸಂಘದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆವಹಿಸಲಿದ್ದಾರೆ.

Leave a Reply

comments

Related Articles

error: