ಮೈಸೂರು

ಸೆ.24ರಂದು ನೇಕಾರರ ರಾಜ್ಯಮಟ್ಟದ ವಧು-ವರರ ಸಮಾವೇಶ

ಮೈಸೂರು, ಸೆ.22 : ವಿಶ್ವ ನೇಕಾರರ ವಧು-ವರರ ಮಾಹಿತಿ ಕೇಂದ್ರದಿಂದ ನೇಕಾರರ ರಾಜ್ಯಮಟ್ಟದ ವಧು-ವರರ ಸಮಾವೇಶವನ್ನು ಸೆ.24ರಂದು ಲಕ್ಷ್ಮೀಪುರಂನ ಜೈನಭವನದಲ್ಲಿ  ಆಯೋಜಿಸಲಾಗಿದೆ.

ಹಿರಿಯ ನ್ಯಾಯವಾದಿ ಶ್ರೀನಿವಾಸಮೂರ್ತಿ ಬೆಳಗ್ಗೆ 10 ಗಂಟೆಗೆ ಚಾಲನೆ ನೀಡುವರು, ಕರ್ನಾಟಕ ರಾಜ್ಯ ನೇಕಾರರ ಸಮುದಾಯಗಳ ಒಕ್ಕೂಟ ಜಿಲ್ಲಾಧ್ಯಕ್ಷ ಆರ್.ಮೂರ್ತಿ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಆರ್.ಶ್ರೀಧರ್, ಬಿ.ಆರ್.ಪದ್ಮನಾಭ್, ಚಲುವರಾಜು, ಕೆ.ಜೆ.ರಾಮಶೆಟ್ಟಿ, ಎನ್.ಇ.ದೇವೇಂದ್ರ, ವೈ.ಸುಬ್ರಾಯಶೆಟ್ಟಿ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿಯಾಗುವರು ಎಂದು ಪ್ರಧಾನ ಕಾರ್ಯದರ್ಶಿ ರಾಮಸ್ವಾಮಿ ತಿಳಿಸಿದರು.

ಸಮುದಾಯದ ವಿವಿಧ ಪಂಗಡಗಳಾದ ದೇವಾಂಗ, ಪದ್ಮಶಾಲಿ, ಕುರುಹಿನಶೆಟ್ಟಿ, ತೊಗಟವೀರ, ಪಟ್ಟಸಾಲಿ, ಸ್ವಕುಳಸಾಲಿ, ಹಟಗಾರ, ಶೆಟ್ಟಿಗಾರ, ಜಾಡ, ಶಿವಸಾಲಿ ಸೇರಿದಂತೆ ಎಲ್ಲಾ ಒಳಪಂಗಡದವರು ಸಮಾವೇಶದಲ್ಲಿ ಭಾಗವಹಿಸಬಹುದು. 500 ರೂ.ನೋಂದಣಿ ಶುಲ್ಕವಿದೆ. ನೋಂದಣಿಯಾದವರು 3 ತಿಂಗಳವರೆಗೂ ವಧು-ವರರ ಕೇಂದ್ರ ಉಚಿತ ಮಾಹಿತಿ ಪಡೆಯಬಹುದು. ಮಾಹಿತಿಗಾಗಿ ಮೊ.ನಂ. 9241228575 ಅನ್ನು ಸಂಫರ್ಕಿಸಬಹುದು.

ಕೇಂದ್ರದ ಎಸ್.ದಿವಾಕರ್, ಎಂ.ಎನ್.ಆನಂದ್, ವಿ.ಕಾಂತರಾಜ್, ಎಚ್.ಉಗ್ರಶೆಟ್ಟಿ, ಎಸ್.ಎಸ್.ಹೇಮಣ್ಣ ಸುದ್ದಿಗೋಷ್ಟಿಯಲ್ಲಿ ಹಾಜರಿದ್ದರು (ವರದಿ : ಕೆ.ಎಂ.ಆರ್)

Leave a Reply

comments

Related Articles

error: