ಪ್ರಮುಖ ಸುದ್ದಿಮೈಸೂರು

ಈ ಬಾಲೆಯ ಸಾಹಸ ನೋಡಿದರೆ ಮೈ ಜುಮ್ಮೆನ್ನಲಿದೆ : ಬೈಕ್ ಲ್ಲಿ ಚಲಿಸಿ ಧೂಳೆಬ್ಬಿಸಿದ ಬಾಲೆ

ಮೈಸೂರು,ಸೆ.22:- ಮೊದಲು ಕಾಣಿಸಿದ್ದು ಬರೀ ಧೂಳು ಮಾತ್ರ ಆದರೆ ಬೈಕ್ ಹತ್ತಿರ ಬರುತ್ತಿದ್ದಂತೆ ಬೈಕ್ ಚಲಾಯಿಸುತ್ತಿದ್ದವರ ದರ್ಶನವಾಗಿತ್ತು. ಅವಳನ್ನು ನೋಡಿ ಬೆಚ್ಚಿ ಬೀಳುವ ಸರದಿ ಪ್ರೇಕ್ಷಕರದ್ದಾಗಿತ್ತು. ಯಾಕೆಂದರೆ ಧೂಳೆಬ್ಬಿಸುತ್ತ ಬಂದ್ದಿದ್ದು ಏಳರ ಹರೆಯದ ಬಾಲೆ.

ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಚಿಣ್ಣರ ದಸರೆಯಲ್ಲಿ ಏಳು ವರ್ಷದ ಬಾಲೆ ಚಮತ್ಕಾರವನ್ನೇ ಮಾಡಿದ್ದಾಳೆ.ರೋಮಾಂಚನಕಾರಿ ಡೆಸೆರ್ಟ್ ಬೈಕ್ ಸವಾರಿ ನಡೆಸಿದ್ದು, ಪ್ರೇಕ್ಷಕರು ಒಮ್ಮೆ ಉಸಿರು ಬಿಗಿಹಿಡಿದು ನಿಲ್ಲುವಂತೆ ಮಾಡಿದ್ದಾಳೆ. ಆಕೆಯ ಹೆಸರು ರಿಫಾ ತಸ್ಕೀನ್ . ಆಕೆಯ  ಬೈಕ್ ಸಾಹಸವನ್ನು ಎಂಥಹವರೂ ಮೆಚ್ಚಲೇಬೇಕು. ಬೈಕ್ ರೌಂಡಿಂಗ್, ಜಂಪಿಂಗ್ ಮಾಡಿಸಿ ಗಮನ ಸೆಳೆದಳು. ಸಂತಜೋಸೆಫರ ಶಾಲೆಯಲ್ಲಿ 2 ನೇ ತರಗತಿ ಓದುತ್ತಿರುವ ರಿಫಾ ಪೋಷಕರಿಗೆ ಈಕೆಯನ್ನು ವರ್ಲ್ಡ್ ಚಾಂಪಿಯನ್ ಮಾಡಿಸುವಾಸೆ. ತಂದೆ ತಾಜುದ್ದೀನಿ, ತಾಯಿ ಬೀಬಿ ಫಾತಿಮಾ, ಮಗಳ ಕುರಿತು ಮಾತನಾಡಿದ ತಾಜುದ್ದೀನ್ ಬೇಟಿ ಪಡಾವೋ..ಬೇಟಿ ಬಚಾವೋ  ಎಂಬ ಪ್ರಧಾನಿ ಮೋದಿಯವರ ಘೋಷಣೆಯಿಂದ ಸ್ಫೂರ್ತಿ ಪಡೆದು ಈ ಪ್ರಯತ್ನ ನಡೆದಿದೆ. ಗಂಡು ಮಕ್ಕಳು ಇಲ್ಲದ ಕಾರಣ ಹೆಣ್ಣು ಮಕ್ಕಳ‌ ಮೂಲಕವೇ ವಿಶ್ವ ದಾಖಲೆ ಮಾಡಿಸಬೇಕೆಂಬ ಮಹತ್ವಾಕಾಂಕ್ಷೆಯಿದೆ. ಐದು ಚಕ್ರದ ವಾಹನವಿದಾಗಿದ್ದು ನಾನೇ ಬೈಕ್ ವಿನ್ಯಾಸಗೊಳಿಸಿದ್ದೇನೆ ಎಂದರು. ಹಿಮ್ಮುಖ ಮುಮ್ಮಖವಾಗಿ ಏಕಕಾಲಕ್ಕೆ ಐವತ್ತು ರೌಂಡ್ ಸುತ್ತಿಸಿ ಗಿನಿಸ್ ದಾಖಲೆ ಸೇರ್ಪಡೆ ಗೆ ನಿರಂತರ ಪ್ರಯತ್ನ ನಡೆಸಿದ್ದಾಳಂತೆ ಈ ಬಾಲೆ. ಅವಳ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂ ಹಾರೈಕೆ ನಮ್ಮದು. (ಆರ್.ವಿ,ಎಸ್.ಎಚ್)

Leave a Reply

comments

Related Articles

error: