ಮೈಸೂರು

ಸೆ.24ರಂದು ಚಾಮರಾಜ ಕ್ಷೇತ್ರದ ಕುಂಬಾರರ ಸಂಘ ಉದ್ಘಾಟನೆ

ಮೈಸೂರು,ಸೆ.22 : ಶ್ರೀಕುಲಾಲಗುಂಡ ಬ್ರಹ್ಮಾರ್ಯ ಕುಂಬಾರರ ಸಂಘವು ಚಾಮರಾಜ ಕ್ಷೇತ್ರದಲ್ಲಿ ಸೆ.24ರಂದು ಸಂಘದ ಕಚೇರಿಯನ್ನು ಉದ್ಘಾಟಿಸಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ಎಸ್.ಹೇಮಂತ ಕುಮಾರ್ ತಿಳಿಸಿದರು.

ಹೆಬ್ಬಾಳ ಮುಖ್ಯರಸ್ತೆಯ, ಮೋರ್ ಬಳಿ ಬೆಳಗ್ಗೆ 10 ಗಂಟೆಗೆ ಸಂಸದ ಪ್ರತಾಪ ಸಿಂಹ ಕಚೇರಿಯನ್ನು ಉದ್ಘಾಟಿಸುವರು.  ಶಾಸಕ ವಾಸು ವೇದಿಕೆಯ ಕಾರ್ಯಕ್ರಮ ಉದ್ಘಾಟಿಸುವರು. ಸಂಘದ ಜಿಲ್ಲಾಧ್ಯಕ್ಷ ಹೆಚ್.ಎಸ್. ಪ್ರಕಾಶ್ ಅಧ್ಯಕ್ಷತೆ ವಹಿಸುವರು ಎಂದು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯ ಡಾ.ಬಿ.ಎಸ್.ಕೃಷ್ಣ ಪ್ರಸಾದ್ ಹಾಗೂ ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಆರ್.ಶ್ರೀನಿವಾಸ ಅವರನ್ನು ಸನ್ಮಾನಿಸಲಾಗುವುದು. ಪಾಲಿಕೆ ಸದಸ್ಯರಾದ ಕೆ.ಟಿ.ಚೆಲುವೇಗೌಡ, ಶಿವಮಾದು, ಗಿರೀಶ್ ಪ್ರಸಾದ್, ಶಿವಣ್ಣ, ರಮೇಶ್ ಹಾಗೂ ಸಂಘದ ಪದಾಧಿಕಾರಿಗಳು, ಆಡಳಿತ ಮಂಡಳಿ ಕಾರ್ಯಕ್ರಮದಲ್ಲಿ ಭಾಗಿಯಾಗುವರು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ರಾಮು, ಉಪಾಧ್ಯಕ್ಷ ಸಣ್ಣ ಶೆಟ್ಟಿ, ಸಹಕಾರ್ಯದರ್ಶಿ ವಿ.ರವಿ, ಸಂಘಟನಾ ಕಾರ್ಯದರ್ಶಿ ಎಸ್.ಶಿವಕುಮಾರ್ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: