ಮೈಸೂರು

ಪ್ರವಾಸಿಗರಿಗೆ ಶುದ್ಧ ಕುಡಿಯುವ ನೀರು ನೀಡುವ ಕಾರ್ಯಕ್ರಮಕ್ಕೆ ಚಾಲನೆ

ಮೈಸೂರು, ಸೆ.೨೨: ನಾಡಹಬ್ಬ, ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ನಗರಕ್ಕೆ ಆಗಮಿಸುವ ಪ್ರವಾಸಿಗರಿಗೆ ಉಚಿತವಾಗಿ ಶುದ್ಧ ಕುಡಿಯುವ ನೀರು ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊಕೆ.ಎಸ್.ರಂಗಪ್ಪ ಚಾಲನೆ ನೀಡಿದರು.
ಮೈಸೂರು ಕನ್ನಡ ವೇದಿಕೆ, ಡಾ.ರಾಜ್ ಕನ್ನಡ ಸೇನೆ, ಪ್ರಗತಿ ಪ್ರತಿಷ್ಠಾನ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ರೋಟರ್‍ಯಾಕ್ಟ್ ಕ್ಲಬ್ ಐವರಿ ಸಿಟಿ, ನೆರವು ಟ್ರಸ್ಟ್, ಕಾವೇರಿ ಬಳಗದ ಸಂಯುಕ್ತಾಶ್ರಯದಲ್ಲಿ ನಗರದ ಕೆ.ಆರ್.ವೃತ್ತದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಸಾರ್ವಜನಿಕರಿಗೆ ನೀರು ವಿತರಣೆ ಮಾಡುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮೈಸೂರು ಸಂಸ್ಕೃತಿಗಳ ನಗರ. ದಸರಾ ಮಹೋತ್ಸವ ಕೇವಲ ಮೈಸೂರಿಗೆ ಸೀಮಿತವಾಗದೆ ವಿಶ್ವವ್ಯಾಪಿಯಾಗಿದೆ. ಇಂತಹ ಮಹೋತ್ಸವಕ್ಕೆ ದೇಶದ ಉದ್ದಗಲದಿಂದ ಲಕ್ಷಾಂತರ ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಅಂತಹವರಿಗೆ ಶುದ್ಧ ಕುಡಿಯುವ ನೀರು ನೀಡುವ ಮೂಲಕ ಮೈಸೂರು ಕನ್ನಡ ವೇದಿಕೆ ಉತ್ತಮ ಕಾರ್ಯ ಮಾಡುತ್ತಿದೆ. ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಮೈಸೂರಿಗರ ಹೃದಯವೈಶಾಲ್ಯತೆ ಈ ಮೂಲಕ ತಿಳಿಯಲಿದೆ. ಇಂತಹ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭ ಸಾಹಿತಿ ಬನ್ನೂರು ಕೆ.ರಾಜು, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿಯಮ್ಮ, ಡಾ.ರಾಜ್ ಕನ್ನಡ ಸೇನೆಯ ಮಹದೇವಸ್ವಾಮಿ, ಶ್ರೀ ಕೆಟರರ್ಸ್ ಮಾಲೀಕ ಹೆಚ್.ಎನ್.ಶ್ರೀಧರ್, ರಾಧಾಕೃಷ್ಣ, ಪ್ಯಾಲೇಸ್ ಬಾಬು, ಧನಪಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: