ಪ್ರಮುಖ ಸುದ್ದಿಮೈಸೂರು

ರೈತ ದಸರಾ ಮಹೋತ್ಸವಕ್ಕೆ ಚಾಲನೆ : ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ 24ಮಂದಿ ರೈತರಿಗೆ ಸನ್ಮಾನ

ಮೈಸೂರು,ಸೆ.22: – ಮೂರು ದಿನಗಳು ನಡೆಯುವ ರೈತ ದಸರಾ ಮಹೋತ್ಸವಕ್ಕೆ ಶುಕ್ರವಾರ ನಗರದ ಜೆ.ಕೆ.ಮೈದಾನದಲ್ಲಿರುವ ಮೆಡಿಕಲ್ ಕಾಲೇಜು ಅಲ್ಯುಮಿನಿ ಸಭಾಂಗಣ ದಲ್ಲಿ ಬೆಂಗಳೂರು ಜೆಕೆವಿಕೆ ಕೃಷಿ ವಿವಿಯ ಉಪಕುಲಪತಿ ಡಾ.ಎಂ.ಶಿವಣ್ಣ ಹೊಂಬಾಳೆ ಹೂ ಬಿಡಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 24 ರೈತರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ್ ನಜೀರ್ ಅಹಮದ್, ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎಸ್.ದಯಾನಂದ ಮೂರ್ತಿ, ಜಂಟಿ ಕೃಷಿ ನಿರ್ದೇಶಕ ಕೆ.ಎಂ.ಸೋಮಸುಂದ್ರ, ರೈತ ದಸರಾ ಉಪಾಧ್ಯಕ್ಷ   ಯು.ಎಸ್.ರಮೇಶ್, ಮಹದೇವ್ ಗಾಣಿಗ್, ಹಿರೇಹಳ್ಳಿ ಸೋಮೇಶ್, ಡಾ.ಸಿ.ರಾಮಚಂದ್ರ, ಡಾ.ಕೆ.ಎಸ್.ಶುಭಶ್ರೀ, ಡಾ.ಸಿ.ರಾಮಚಂದ್ರ, ಕೇಶವಮೂರ್ತಿ ಇತರರು ಉಪಸ್ಥಿತರಿದ್ದರು.

ಕೃಷಿ ಇಲಾಖೆಯ ಜಿಲ್ಲಾ ಮಟ್ಟದ 2015-16ನೇ ಸಾಲಿನ ಬೆಳೆ ಕಟಾವು ಸ್ಪರ್ಧೆಯಲ್ಲಿ ಜಯಮ್ಮ, ರಾಜೇಂದ್ರ ಕುಮಾರ್, ವೀರಜಮ್ಮ, ಎ.ನಾಗರಾಜ್, ಕೃಷಿ ಇಲಾಖೆ ವತಿಯಿಂದ 2015-16 ನೇ ಸಾಲಿನ ತಾಲೂಕುಮಟ್ಟದ ಕಟಾವು ಸ್ಪರ್ಧೆಯಲ್ಲಿ ಕೆಂಪಲಮ್ಮ, ಪುಟ್ಟೇಗೌಡ, ಪಾಪೇಗೌಡ, ಕೆ.ಎಸ್.ಶಿವಕುಮಾರ್, ಕೆ.ನಾರಾಯಣ, ತೋಟಗಾರಿಕೆ ಇಲಾಖೆ-ರೈತರು ಎನ್.ಕುಮಾರ್, ಗಿರಿಜಾ, ಮಾರಯ್ಯ, ಪಶುಸಂಗೋಪನೆ-ರೈತರು ಚಂದ್ರಶೇಖರ, ಅಶ್ವತ್ಥ, ಸಾಗರ್ ಅರಸ್, ಮೀನುಗಾರಿಕೆ ಇಲಾಖೆ-ರೈತರು ಮಸ್ತಾನ್ ಸಾಬ್, ವಿ.ಮಹೇಶ್, ಮಂಚಯ್ಯ, ರೇಷ್ಮೆ ಇಲಾಖೆ-ರೈತರು ಪುಟ್ಟೇಗೌಡ, ಮಲ್ಲೇಶ್, ಎಸ್.ಪಿ.ಬಸವರಾಜು, ಅರಣ್ಯ ಇಲಾಖೆ-ಎಚ್.ಬಿ.ಶಿವರಾಜು, ಎಸ್.ಎಂ.ಉಲ್ಲಾಸ್, ಎಚ್.ಎಸ್.ಮಂಜುನಾಥ ಗೌಡ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ರೈತ ಗೀತೆಯನ್ನು ಹಾಡಲಾಯಿತು (ಎಂ.ಎನ್)

Leave a Reply

comments

Related Articles

error: