ಮೈಸೂರು

ಸೆ.23ರಂದು ಹಿಂದಿ ದಿವಸ್ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

ಮೈಸೂರು,ಸೆ.22 : ವಿಶ್ವವಿದ್ಯಾಲಯ, ಪದವಿ ಕಾಲೇಜುಗಳ ಹಿಂದಿ ಅಧ್ಯಾಪಕರ ಸಂಘ, ಸಂತಫಿಲೋಮಿನಾ ಕಾಲೇಜು ಆಶ್ರಯದಲ್ಲಿ ಸೆ.23ರಂದು ‘ಹಿಂದಿ ದಿವಸ್’, ಪ್ರೇಮಚಂದ್ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಡಾ.ಶಾಲಿವಾಹನ ಬಿ.ಕೊಳ್ಳೊರೆ ತಿಳಿಸಿದರು.

ಸಂತ ಫಿಲೋಮಿನಾ ಕಾಲೇಜು ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮವನ್ನು ಬರ್ನಾಡ ಪ್ರಕಾಶ ಬರ್ನೀಸ್ ಉದ್ಘಾಟಿಸುವರು. 5 ಸಾವಿರ ರೂ ನಗದು ಪ್ರಶಸ್ತಿಯನ್ನು ಮಹೇಂದ್ರ ಮಣೊತ ಪ್ರದಾನ ಮಾಡುವರು. ಇದೇ ಸಂದರ್ಭದಲ್ಲಿ ಜ್ಞಾನಪೀಠ ಪುರಸ್ಕೃತ ಹಿಂದಿ ಸಾಹಿತಿಗಳ ಕೃತಿಯನ್ನು ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಹಾರಾಣಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ.ಜಿ.ನಿರ್ಮಲ ಅವರನ್ನು ಈಶ್ವರ ಚಂದ್ರ ಮಿಶ್ರ ಸನ್ಮಾನಿಸುವರು. ಡಾ.ರೂತ್ ಶಾಂತಕುಮಾರಿ ಅಧ್ಯಕ್ಷತೆ ವಹಿಸುವರು. ಬಳಿಕ ‘ ಪದವಿ ಪಠ್ಯಪುಸ್ತಕ ಹಾಗೂ ಪಠ್ಯಕ್ರಮ ಕುರಿತು’ ಡಾ.ವಾಸುದೇವ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಂವಾದ ಗೋಷ್ಠಿ ನಡೆಯಲಿದೆ.

ಸಂಜೆ ನಡೆಯುವ ಸಮಾರೋಪದಲ್ಲಿ ಡಾ.ಎಂ.ಚನ್ನಬಸವಗೌಡ ಅತಿಥಿಯಾಗಿ ಭಾಗವಹಿಸುವರು. ಮೈಸೂರು ವಿವಿಯ ಎಲ್ಲಾ ಕಾಲೇಜುಗಳ ಹಿಂದಿ ಅಧ್ಯಾಪಕರು ಕಾರ್ಯಕ್ರಮದಲ್ಲಿ ಭಾಗಿಯಾಗುವರು ಎಂದು ತಿಳಿಸಿದರು.

ಯುವರಾಜ ಕಾಲೇಜಿನ ಪ್ರಾಧ್ಯಾಪಕ ಡಾ.ಜಯಪ್ರಕಾಶ್, ಸಂತ ಫಿಲೋಮಿನಾ ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಪೂರ್ಣಿಮಾ ಉಮೇಶ್ ಸುದ್ದಿಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: