
ಮೈಸೂರು
ಗಾಲಿಗಳ ಮೇಲೆ ಅರಮನೆ ಪ್ರವಾಸಕ್ಕೆ ಚಾಲನೆ
ಮೈಸೂರು,ಸೆ.22:- ಮೈಸೂರು ಅರಮನೆಗಳ ಬೀಡು, ಪ್ರವಾಸೋದ್ಯಮ ಇಲಾಖೆ ದಸರಾ ಮಹೋತ್ಸವದ ಅಂಗವಾಗಿ ಗಾಲಿಗಳ ಮೇಲೆ ಅರಮನೆ ( ಪ್ಯಾಲೇಸ್ ಆನ್ ವ್ಹೀಲ್ಸ್) ಕಾರ್ಯಕ್ರಮವನ್ನು ಸಾರಿಗೆ ಸಚಿವರಾದ ಎಚ್. ಎಂ. ರೇವಣ್ಣ ಅವರು ಅರಮನೆ ಉತ್ತರ ದ್ವಾರದ ಶುಕ್ರವಾರ ಉದ್ಘಾಟಿಸಿದರು.
ಗಾಲಿಗಳ ಮೇಲೆ ಅರಮನೆ ಕಾರ್ಯಕ್ರಮ ಪ್ರವಾಸಿಗರಿಗೆ ಮೈಸೂರಿನ ಅರಮನೆಗಳು ಹಾಗೂ ವಸ್ತು ಸಂಗ್ರಹಾಲಯಗಳನ್ನು ಪರಿಚಯಿಸಲಿದೆ. ಈ ವಿನೂತನವಾದ ಕಾರ್ಯಕ್ರಮಕ್ಕೆ ಎರಡು ಹವಾನಿಯಂತ್ರಿತ ಬಸ್ ಗಳನ್ನು ಬಳಸಲಾಗುತ್ತಿದೆ. ಬೆಳಗ್ಗೆ ಅಂಬಾವಿಲಾಸ ಅರಮನೆಯಿಂದ ಪ್ರವಾಸ ಆರಂಭಿಸಿ ಮಧ್ಯಾಹ್ನ ಲಲಿತ ಮಹಲ್ ಅರಮನೆಯಲ್ಲಿ ಊಟದ ವ್ಯವಸ್ಥೆ ಯೊಂದಿಗೆ ರಾತ್ರಿ ಮತ್ತೆ ಅಂಬಾವಿಲಾಸ ಅರಮನೆ ಬಳಿಪ್ರವಾಸ ಮುಗಿಯಲಿದೆ. ಓಟ್ಟು ಪ್ರವಾಸದಲ್ಲಿ 8 ಪ್ರಮುಖ ಸ್ಥಳಗಳನ್ನು ಪರಿಚಯಿಸಲಾಗುತ್ತಿದ್ದು, ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ನುರಿತ ಪ್ರವಾಸಿ ಮಾರ್ಗದರ್ಶಿಗಳು ಪಾರಂಪರಿಕ ಕಟ್ಟಡಗಳ ಮಾಹಿತಿ ನೀಡಲಿದ್ದಾರೆ. ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೆಶಕರಾದ ಹೆಚ್.ಪಿ. ಜನಾರ್ಧನ್ ಅವರು ಮಾಹಿತಿ ನೀಡಿ ಈ ವಿಶೇಷ ಪ್ರವಾಸ ಮಾಡಲು ಪ್ರತಿಯೊಬ್ಬ ಪ್ರವಾಸಿಗರಿಗೆ 999ರೂ ನಿಗದಿಪಡಿಸಲಾಗಿದೆ. ಸೆಪ್ಟಂಬರ್ 22 ರಿಂದ ಅಕ್ಟೋಬರ್ 2 ರವರೆಗೂ ಗಾಲಿಗಳ ಮೇಲೆ ಅರಮನೆ ಮುಂದುವರಿಯಲಿದೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)