
ದೇಶ
ಅತ್ಯಾಚಾರ ಪ್ರಕರಣ: ನಟ ಮನೋಜ್ ಬಂಧನ
ಮುಂಬೈ, ಸೆ.22: ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ನಟ ಮನೋಜ್ ಆರ್ ಪಾಂಡೆಯನ್ನು ಗುರುವಾರ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಭೋಜ್ಪುರಿ ನಟಿ ಮೇಲೆ ಅತ್ಯಾಚಾರವೆಸಗಿರುವ ಆರೋಪ ಹೊತ್ತಿರುವ ನಟ ಮನೋಜ್ ನೇಪಾಳಕ್ಕೆ ಓಡಿಹೋಗುವ ಪ್ರಯತ್ನದಲ್ಲಿದ್ದ ಎನ್ನಲಾಗಿದೆ.
ಈ ಉದ್ದೇಶಕ್ಕಾಗಿ ಹುಡುಗಿಯೊಬ್ಬಳಿಂದ 5 ಲಕ್ಷ ರೂ. ಕೇಳಿದ್ದ ಎನ್ನಲಾಗಿದೆ. ಈ ವಿಷಯ ಮನೋಜ್ ನ ಮಾಜಿ ಪ್ರೇಯಸಿಗೆ ಗೊತ್ತಾಗುತ್ತಿದ್ದಂತೆ ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಹಾಗೆ ಮನೋಜ್ ಗೆ ಹಣ ನೀಡಲು ಬರುತ್ತಿದ್ದ ಹುಡುಗಿಯನ್ನು ಹಿಂಬಾಲಿಸಿದ್ದಾರೆ. ಹುಡುಗಿಯಿಂದ ಮನೋಜ್ ಹಣ ಪಡೆಯುತ್ತಿದ್ದಂತೆ ಪೊಲೀಸರನ್ನು ನೋಡಿದ್ದಾನೆ. ಅಲ್ಲಿಂದ ಓಡಿ ಹೋಗಲು ಯತ್ನಿಸಿದ್ದಾನೆ. ಆದರೆ ಪೊಲೀಸರು ಮನೋಜ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. (ವರದಿ: ಎಲ್.ಜಿ)