ಕರ್ನಾಟಕ

ಸುಕ್ರಿ ಬೊಮ್ಮಗೌಡ ಸೇರಿ ಐವರಿಗೆ ಚುಂಚಶ್ರೀ ಪ್ರಶಸ್ತಿ

ಆದಿಚುಂಚನಗಿರಿ, ಸೆ.22 : ಆದಿಚುಂಚನಗಿರಿ ಮಠದ ಪ್ರತಿಷ್ಠಿತ ಚುಂಚಶ್ರೀ ಪ್ರಶಸ್ತಿಗೆ ಈ ಬಾರಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸುಕ್ರಿಬೊಮ್ಮಗೌಡ, ಡಾ.ಮಾಲತಿಹೊಳ್ಳ ಸೇರಿದಂತೆ ಐವರು ಗಣ್ಯರು ಭಾಜನರಾಗಿದ್ದಾರೆ.

ಕ್ರೀಡಾ ಸೇವೆಯಲ್ಲಿ ಬೆಂಗಳೂರಿನ ಪದ್ಮಶ್ರೀ ಡಾ.ಮಾಲತಿಹೊಳ್ಳ, ಒಲಂಪಿಕ್ ಪದಕ ವಿಜೇತೆ ಸಾಕ್ಷಿ ಮಲ್ಲಿಕ್, ಜಾನಪದ ಕಲಾವಿದೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಪದ್ಮಶ್ರೀ ಪುರಸ್ಕೃತೆ ಸುಕ್ರಿಬೊಮ್ಮಗೌಡ, ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತುಮಕೂರಿನ ಡಾ.ಡಿ.ಕೆ.ರಾಜೇಂದ್ರ, ಸಂಸ್ಕೃತ ಮತ್ತು ಸಾಹಿತ್ಯ ಕ್ಷೇತ್ರದಿಂದ ಬೆಂಗಳೂರಿನ ಪ್ರೊ.ಶಿವರಾಮ್ ಅಗ್ನಿಹೋತ್ರಿ ಚುಂಚಶ್ರೀ ಪ್ರಶಸ್ತಿಗೆ ಭಾಜನರಾದ ಮಹನೀಯರು.

ಪ್ರಶಸ್ತಿಯು ತಲಾ 50 ಸಾವಿರ ನಗದು, ಫಲಕಗಳನ್ನು ಒಳಗೊಂಡಿದೆ. ಇದೇ ಭಾನುವಾರ ಶ್ರೀ ಕ್ಷೇತ್ರ ಆದಿಚುಂಚನಗಿರಿ ಪುಣ್ಯಭೂಮಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಶ್ರೀಗಳು ಪ್ರಶಸ್ತಿ ಪ್ರದಾನ ಮಾಡುವರು. ಶ್ರೀ ಕ್ಷೇತ್ರದಲ್ಲಿ ನಾಳೆಯಿಂದ 25ರ ವರೆಗೂ 39ನೇ ರಾಜ್ಯಮಟ್ಟದ ಕಾಲಭೈರವೇಶ್ವರಸ್ವಾಮಿಯ ಜಾನಪದ ಕಲಾಮೇಳ ನಡೆಯಲಿದೆ. ಭಾನುವಾರ ನಡೆಯಲಿರುವ ಸಮಾರಂಭದಲ್ಲಿ ಐವರು ಮಹನೀಯರಿಗೆ ಚುಂಚಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು.

(ಎನ್.ಬಿ)

Leave a Reply

comments

Related Articles

error: