ಮೈಸೂರು

ಪಿಡಿಓ ಅವ್ಯವಹಾರ ಖಂಡಿಸಿ ಶ್ರೀರಾಂಪುರ ನಿವಾಸಿಗಳ ಪ್ರತಿಭಟನೆ

ಮೈಸೂರು,ಸೆ.22:- ಶ್ರೀರಾಂಪುರ ವ್ಯಾಪ್ತಿಯ ನಿವಾಸಿಗಳು ಜಿಲ್ಲಾ ಪಂಚಾಯತ್ ಎದುರು ಪಿಡಿಓ ಅವ್ಯವಹಾರ ಖಂಡಿಸಿ ಪ್ರತಿಭಟನೆ ನಡೆಸಿದರು.

ಶುಕ್ರವಾರ ಜಿಲ್ಲಾ ಪಂಚಾಯತ್ ಎದುರು ಜಮಾಯಿಸಿದ ಶ್ರೀರಾಂಪುರ ನಿವಾಸಿಗಳು ಪಿಡಿಓ ಹನುಮಂತರಾಜು ಅವ್ಯವಹಾರ ನಡೆಸಿದ್ದು, ಕಾನೂನುಗಳೆಲ್ಲ ಗಾಳಿಗೆ ತೂರಿದ್ದಾನೆ. ಇಲ್ಲಿನ ನಿವಾಸಿಗಳಿಗೆ ಇದರಿಂದ ತೊಂದರೆಯಾಗುತ್ತಿದೆ.ಈಗಾಗಲೇ ಭ್ರಷ್ಟಾಚಾರ ನಿಗ್ರಹದಳಕ್ಕೆ ದೂರು ನೀಡಿದ್ದೇವೆ. ನೀವು ಕೂಡ ಅವರ ವಿರುದ್ಧ ಕ್ರಮ ಜರುಗಿಸಿ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಐವತ್ತಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: