
ಮೈಸೂರು
ಜಂಬೂ ಸವಾರಿ ಆನೆಗಳಿಗೆ ಮೂರನೇ ಹಂತದ ಸಿಡಿಮದ್ದು ತಾಲೀಮು
ಮೈಸೂರು,ಸೆ.22:- ನಾಡಹಬ್ಬ ದಸರಾ ಸಂಭ್ರಮ ಒಂದೆಡೆ ಸಡಗರ ಸಂಭ್ರಮದಲ್ಲಿ ನಡೆಯುತ್ತಿದ್ದು, ಜಂಬೂ ಸವಾರಿ ಆನೆಗಳಿಗೆ ಮೂರನೇ ಹಂತದ ಸಿಡಿಮದ್ದು ತಾಲೀಮು ನಡೆಸಲಾಗಿದೆ.
ಅರಮನೆಯ ವರಹಾ ದ್ವಾರ ಬಳಿ ಫಿರಂಗಿ ಸಿಡಿಸಿ ತಾಲೀಮು ನಡೆಸಲಾಯಿತು. ಅರ್ಜುನ, ಅಭಿಮನ್ಯು, ಕಾವೇರಿ ಸೇರಿದಂತೆ 15ಆನೆಗಳು ಪಾಲ್ಗೊಂಡಿದ್ದವು. ಎರಡು ಹಂತಗಳಲ್ಲಿ ನಡೆದ ತಾಲೀಮಿನಲ್ಲಿ ಕೆಲವು ಆನೆಗಳು ಸಿಡಿಮದ್ದಿಗೆ ಬೆಚ್ಚಿದ್ದವು. ಈ ಹಿನ್ನೆಲೆಯಲ್ಲಿ ಈ ಭಾರಿ ಇನ್ನಷ್ಟು ಮುತುವರ್ಜಿಯಿಂದ ತಾಲೀಮು ನಡೆಸಲಾಯಿತು. ಈ ಬಾರಿ ತಾಲೀಮಿನಲ್ಲಿ ಅಶ್ವಗಳು ಗೈರಾಗಿವೆ. (ಆರ್.ವಿ,ಎಸ್.ಎಚ್)