ಮನರಂಜನೆ

‘ಹ್ಯಾಟ್ರಿಕ್ ಹೀರೋ’ ಪಟ್ಟ ಶಿವರಾಜ್ ಕುಮಾರ್ ಗೆ ಮಾತ್ರ ಸೀಮಿತ

ಬೆಂಗಳೂರು,ಸೆ.22: ‘ಅದ್ಧೂರಿ’ ಚಿತ್ರದ ಮೂಲಕ ಸ್ಯಾಂಡಲ್  ವುಡ್ ಗೆ ಎಂಟ್ರಿ ಕೊಟ್ಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ‘ಬಹದ್ದೂರ್’ ಮತ್ತು ‘ಭರ್ಜರಿ’ ಸಿನಿಮಾಗಳ ಮೂಲಕ  ಹ್ಯಾಟ್ರಿಕ್ ಯಶಸ್ಸು ಕಂಡಿದ್ದಾರೆ. ಹೀಗಾಗಿ ಧ್ರುವ ಸರ್ಜಾ ಅವರನ್ನು  ‘ಹ್ಯಾಟ್ರಿಕ್ ಹೀರೋ’ ಎಂದು ಕರೆಯಲು  ಅಭಿಮಾನಿಗಳು ಮುಂದಾಗಿದ್ದಾರೆ. ಆದರೆ  ಆ ಬಿರುದು ಶಿವರಾಜ್ ಕುಮಾರ್ ಗೆ ಮಾತ್ರ ಸೀಮಿತ, ಹೀಗಾಗಿ ‘ಹ್ಯಾಟ್ರಿಕ್ ಆ್ಯಕ್ಷನ್ ಪ್ರಿನ್ಸ್’ ಅಂತ ಕರೆಯಿರಿ ಎಂದು ಧ್ರುವ ಸರ್ಜಾ ಅಭಿಮಾನಿಗಳಿಗೆ ತಿಳಿಸಿದ್ದಾರೆ.

 ರಾಜ್ಯಾದ್ಯಂತ ಭರ್ಜರಿ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಮೂರು ಸ್ವಮೇಕ್ ಸಿನಿಮಾಗಳಲ್ಲಿ ಯಶಸ್ಸು ಕಂಡ ಹೆಗ್ಗಳಿಕೆಗೆ ಧ್ರುವ ಸರ್ಜಾ ಪಾತ್ರರಾಗಿದ್ದಾರೆ.   ‘ಭರ್ಜರಿ’ ಸಿನಿಮಾದಲ್ಲಿ ರಚಿತಾ ರಾಮ್ ಮತ್ತು ಹರಿಪ್ರಿಯಾ ನಟಿಸಿದ್ದು,  ಚೇತನ್ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ.  ಧ್ರುವ ಸರ್ಜಾ ಅವರ ಮುಂದಿನ ಸಿನಿಮಾದ ಹೆಸರು ‘ಪೊಗರು’.  ಇದು ಅವರ ನಾಲ್ಕನೇ ಸಿನಿಮಾವಾಗಿದ್ದು,   ನಂದ ಕೀಶೋರ್ ನಿರ್ದೇಶಿಸಲಿದ್ದಾರೆ. (ವರದಿ: ಎಲ್.ಜಿ)

Leave a Reply

comments

Related Articles

error: